
ಮೊನಾಕೋ: ಮೊನಾಕೋದಲ್ಲಿ ನಡೆದ ಮಾಂಟೆ ಕಾರ್ಲೋ ಮಾಸ್ಟರ್ಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಉರುಗ್ವೆಯ ಪ್ಯಾಬ್ಲೋ ಕ್ಯೂವಾಸ್ ಜೋಡಿ ಡಬಲ್ಸ್ ಕಿರೀಟ ಮುಡಿಗೇರಿಸಿಕೊಂಡಿದೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ಪ್ಯಾಬ್ಲೋ ಕ್ಯೂವಾಸ್ ಬಲಿಷ್ಠ ಸ್ಪೈನ್ ನ ಫೆಲಿಸಿಯಾನೋ ಲೊಪೇಜ್ ಹಾಗೂ ಮಾರ್ಕ್ ಲೊಪೇಜ್ ವಿರುದ್ಧ 6-3 3-6 10-4 ನೇರ ಸೆಟ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಆ ಮೂಲಕ 2017ನೇ ಸಾಲಿನ ಮಾಂಟೆ ಕಾರ್ಲೋ ಮಾಸ್ಟರ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಮೊದಲ ಸೆಟ್ 6-3 ಅಂತರದಿಂದ ಗೆದ್ದ ರೋಹನ್ ಬೋಪಣ್ಣ-ಪ್ಯಾಬ್ಲೋ ಕ್ಯೂವಾಸ್ ಜೋಡಿ ಅದೇ ಹುರುಪಿನಲ್ಲಿ 2ನೇ ಸೆಟ್ ಗೆ ಕಣಕ್ಕಳಿಯಿತು. ಆದರೆ ಫೆಲಿಸಿಯಾನೋ ಲೊಪೇಜ್ ಹಾಗೂ ಮಾರ್ಕ್ ಲೊಪೇಜ್ ಅವರ ಪ್ರಬಲ ಹೋರಾಟದಿಂದಾಗಿ 3-6 ಸೆಟ್ ಗಳಿಂದ 2ನೇ ಸೆಟ್ ಅನ್ನು ಕಳೆದುಕೊಂಡರು. ಆದರೆ ಮೂರನೇ ಹಾಗೂ ಅಂತಿಮ ಸೆಟ್ ನಲ್ಲಿ ಭರ್ಜರಿಯಾಗಿ ವಾಪಸ್ ಆದ ಬೋಪಣ್ಣ- ಕ್ಯೂವಾಸ್ ಜೋಡಿ 10-4 ಬಾರಿ ಅಂತರದಿಂದ ಮೂರನೇ ಸೆಟ್ ಅನ್ನು ಜಯಿಸುವ ಮೂಲಕ ಭರ್ಜರಿ ಜಯ ಸಾಧಿಸಿದರು. ಅ ಮೂಲಕ ಪ್ರಶಸ್ತಿಯನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಅಂತೆಯೇ 4,273,775 ಯೂರೋ ಹಾಗೂ ಪ್ರಶಸ್ತಿಗೆ ಬೋಪಣ್ಣ-ಕ್ಯೂವಾಸ್ ಪಾತ್ರರಾಗಿದ್ದಾರೆ. ಬೊಪಣ್ಣ ಹಾಗೂ ಕ್ಯಾವಾಸ್ ಗೆ ಪ್ರಸಕ್ತ ಸಾಲಿನ ಮೊದಲ ಪ್ರಶಸ್ತಿ ಇದಾಗಿದೆ.
Advertisement