ಪುಣೆ ವಿರುದ್ಧದ ಪಂದ್ಯದ ವೇಳೆ ಅಂಪೈರ್ ಜತೆ ದುರ್ನಡತೆ: ರೋಹಿತ್‌ಗೆ ಶೇ.50 ದಂಡ

ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ವೇಳೆ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ದುರ್ನಡತೆ ತೋರಿದ ಮುಂಬೈ ಇಂಡಿಯನ್ಸ್ ತಂಡದ..
ರೋಹಿತ್ ಶರ್ಮಾ
ರೋಹಿತ್ ಶರ್ಮಾ
ಮುಂಬೈ: ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ವೇಳೆ ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ದುರ್ನಡತೆ ತೋರಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಗೆ ಐಪಿಎಲ್ ಪಂದ್ಯ ಸಂಭಾವನೆಯ ಶೇಕಡ 50 ರಷ್ಟು ದಂಡ ವಿಧಿಸಲಾಗಿದೆ. 
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪುಣೆ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಪೇರಿಸಿತ್ತು. 161 ರನ್ ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಗೆ ಕೊನೆಯ ಓವರ್ ನಲ್ಲಿ 17 ರನ್ ಗಳನ್ನು ಸಿಡಿಸಬೇಕಿತ್ತು. ಈ ವೇಳೆ ಜೈದೇವ್ ಉನಾದ್ಕತ್ ಕೊನೆ ಓವರ್ ಎಸೆದಿದ್ದರು. 
ಉನಾದ್ಕತ್ ಮೊದಲ ಎಸೆತದಲ್ಲೇ ಹಾರ್ದಿಕ್ ಪಾಂಡ್ಯ ಅವರ ವಿಕೆಟ್ ಪಡೆದಿದ್ದರು. ನಂತರ ರೋಹಿತ್ ಶರ್ಮಾ ಸಿಕ್ಸರ್ ಬಾರಿಸಿದರು. ಈ ವೇಳೆ 4 ಎಸೆತದಲ್ಲಿ 11 ರನ್ ಬೇಕಿತ್ತು. ಆಗ ಉನಾದ್ಕಕ್ ಮೂರನೇ ಎಸೆತವನ್ನು ಬ್ಯಾಟ್ಸ್ ಮನ್ ರೋಹಿತ್ ರಿಂದ ಬಲು ದೂರ ಹೋಗಿದ್ದರೂ ಅಂಪೈರ್ ಎಸ್ ರವಿ ವೈಡ್ ನೀಡಲಿಲ್ಲ. ಇದರಿಂದ ಸಿಟ್ಟಾದ ರೋಹಿತ್ ಅಂಪೈರ್ ಬಳಿ ಬಂದು ಅದು ವೈಡ್ ಎಂದು ವಾದಿಸಿದರು. ಆದರೆ ಅಂಪೈರ್ ವೈಡ್ ನೀಡಲಿಲ್ಲ. ಬಳಿಕ ನಾಲ್ಕನೇ ಎಸೆತದಲ್ಲಿ ರೋಹಿತ್ ಶರ್ಮಾ ಔಟಾಗಿ ಪೆವಿಲಿಯನ್ ಸೇರಿದರು. ಈ ಪಂದ್ಯದಲ್ಲಿ ಮುಂಬೈ ವಿರುದ್ಧ ಪುಣೆ 3 ರನ್ ಗಳಿಂದ ಜಯಗಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com