ನವದೆಹಲಿ: ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ಗುಂಡಿನ ದಾಳಿಗೆ ಬಲಿಯಾದ ಸಿಆರ್‌ಪಿಎಫ್‌ನ 25 ಹುತಾತ್ಮ ಯೋಧರ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ ಭರಿಸುವುದಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಹೇಳಿದ್ದಾರೆ.
ಹುತಾತ್ಮ ಯೋಧರ ಚಿತ್ರಗಳು ಹಾಗೂ ಮೃತಪಟ್ಟ ತಮ್ಮ ತಂದೆಯಂದಿರ ಮೃತದೇಹಗಳ ಮುಂದೆ ಅಳುತ್ತಿರುವ ಮಕ್ಕಳನ್ನು ಕಂಡು ನಡುಗಿ ಹೋದೆ. ತಕ್ಷಣ ಅವರ ಕುಟುಂಬಗಳಿಗೆ ಸಹಾಯ ಹಸ್ತ ಚಾಚಲು ನಿರ್ದೇರಿಸಿದೆ ಎಂದರು.
ಕಳೆದ ಬುಧವಾರ ಪುಣೆ ವಿರುದ್ಧ ನಡೆದ ಪಂದ್ಯದಲ್ಲಿ ಕೆಕೆಆರ್ ನ ಆಟಗಾರರು ಕಪ್ಪು ಪಟ್ಟಿಧರಿಸುವ ಮೂಲಕ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.