ಸಂದೀಪ್ ಶರ್ಮಾ ಮಾರಕ ಬೌಲಿಂಗ್ ಗೆ ತತ್ತರಿಸಿದ ದೆಹಲಿ 67 ರನ್ ಗೆ ಆಲೌಟ್

ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಬೌಲರ್ ಸಂದೀಪ್ ಶರ್ಮಾ ಮಾರಕ ಬೌಲಿಂಗ್ ಗೆ ತತ್ತರಿಸಿದ ದೆಹಲಿ ಡೇರ್ ಡೆವಿಲ್ಸ್ ತಂಡ ಕೇವಲ 67 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.
ಕ್ರಿಕ್ ಇನ್ಫೋ ಚಿತ್ರ
ಕ್ರಿಕ್ ಇನ್ಫೋ ಚಿತ್ರ

ಚಂಡೀಘಡ: ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಬೌಲರ್ ಸಂದೀಪ್ ಶರ್ಮಾ ಮಾರಕ ಬೌಲಿಂಗ್ ಗೆ ತತ್ತರಿಸಿದ ದೆಹಲಿ ಡೇರ್ ಡೆವಿಲ್ಸ್ ತಂಡ ಕೇವಲ 67 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.

ಚಂಡೀಘಡದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತ ದೆಹಲಿ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಪಂಜಾಬ್ ತಂಡದ ಬೌಲರ್ ಸಂದೀಪ್ ಶರ್ಮಾ ಅವರ ಅದ್ಬುತ ಬೌಲಿಂಗ್ ಪ್ರದರ್ಶನದಿಂದಾಗಿ ದೆಹಲಿ  ತಂಡದ ಬಲಾಢ್ಯ ಬ್ಯಾಟಿಂಗ್ ಪಡೆ ಪೆವಿಲಿಯನ್ ಪರೇಡ್ ನಡೆಸಿತು. ಕೆಳ ಕ್ರಮಾಂಕದ ಬ್ಯಾಟ್ಸಮನ್ ಆ್ಯಂಡರ್ಸನ್ ಗಳಿಸಿದ ವೈಯುಕ್ತಿಕ 18 ರನ್ ಗಳೇ ದೆಹಲಿ ತಂಡದ ಬ್ಯಾಟ್ಸಮನ್ ಓರ್ವ ಗಳಿಸಿಗ ಗರಿಷ್ಟ ರನ್ ಗಳಿಕೆಯಾಗಿತ್ತು.  ಇದು ದೆಹಲಿಯ ಕಳಪೆ ಬ್ಯಾಟಿಂಗ್ ಗೆ ಹಿಡಿದ ಕನ್ನಡಿಯಾಗಿತ್ತು.

ದೆಹಲಿ ತಂಡದ ಪ್ರಮುಖ ಬ್ಯಾಟ್ಸಮನ್ ಗಳಾದ ಸ್ಯಾಮಸನ್ (5 ರನ್), ಬಿಲ್ಲಿಂಗ್ಸ್ (0 ರನ್), ನಾಯರ್ (11 ರನ್), ಐಯ್ಯರ್ (6 ರನ್) ಮತ್ತು ರಿಷಬ್ (3 ರನ್) ಬಂದಷ್ಟೇ ನೇಗವಾಗಿ ಪೆವಿಲಿಯನ್ ಸೇರಿಕೊಂಡಿದ್ದು, ದೆಹಲಿ ತಂಡದ  ಕುಸಿತಕ್ಕೆ ಕಾರಣವಾಯಿತು. ಬಾಲಂಗೋಚಿ ಆಟಗಾರರು ಕೊಂಚ ಪ್ರತಿರೋಧ ತೋರಿದರಾದರೂ ಪಂಜಾಬ್ ಬೌಲರ್ ಗಳ ಮಾರಕ ಬೌಲಿಂಗ್ ಗೆ ಅವರ ಬಳಿ ಉತ್ತರವಿರಲಿಲ್ಲ. ಅಂತಿಮವಾಗಿ ದೆಹಲಿ ತಂಡ ಕೇವಲ 67 ರನ್ ಗಳಿಗೆ  ಆಲೌಟ್ ಆಯಿತು.

ಪಂಜಾಬ್ ಪರ ಸಂದೀಪ್ ಶರ್ಮಾ 4 ವಿಕೆಟ್ ಪಡೆದು ಯಶಸ್ವೀ ಬೌಲರ್ ಎನಿಸಿಕೊಂಡರೆ, ಪಟೇಲ್ ಮತ್ತು ಆ್ಯರನ್ ತಲಾ 2 ವಿಕೆಟ್ ಪಡೆದರು. ಅಂತೆಯೇ ಶರ್ಮಾ ಮತ್ತು ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com