2015ರ ಫೆಬ್ರವರಿ 15ರಂದು ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದ ಆರಂಭಕ್ಕೂ ಮುನ್ನ ಉಭಯ ತಂಡಗಳ ರಾಷ್ಟ್ರಗೀತೆಯನ್ನು ಹಾಡುವುದು ವಾಡಿಕೆ. ಅಂತೆ ಭಾರತದ ರಾಷ್ಟ್ರಗೀತೆ ಬಂದ ತಕ್ಷಣ ಮೈದಾನದಲ್ಲಿ ನೆರೆದಿದ್ದ ಬಹುತೇಕ ಅಭಿಮಾನಿಗಳು ಎದ್ದು ರಾಷ್ಟ್ರಗೀತೆಗೆ ದನಿಯಾದರು. ಇಂತಹ ಅಪರೂಪದ ಕ್ಷಣಗಳನ್ನು ಅಭಿಮಾನಿಯೊಬ್ಬ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.