'ರಕ್ಷಾ ಬಂಧನ' ಆಚರಿಸಿ ಮತ್ತೊಮ್ಮೆ ಟ್ರಾಲ್ ಗೊಳಗಾದ ಕ್ರಿಕೆಟಿಗ ಇರ್ಫಾನ್‌ ಪಠಾಣ್‌

ಇತ್ತೀಚೆಗಷ್ಟೇ ತಮ್ಮ ಪತ್ನಿಯ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ನೆಟಿಜನ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದ ಭಾರತ ಕ್ರಿಕೆಟ್‌ ತಂಡದ...
ಇರ್ಫಾನ್ ಪಠಾಣ್
ಇರ್ಫಾನ್ ಪಠಾಣ್
ನವದೆಹಲಿ: ಇತ್ತೀಚೆಗಷ್ಟೇ ತಮ್ಮ ಪತ್ನಿಯ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ನೆಟಿಜನ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದ ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡ್‌ ಆಟಗಾರ ಇರ್ಫಾನ್‌ ಪಠಾಣ್‌ ಇದೀಗ ಮತ್ತೊಮ್ಮೆ ಟ್ರಾಲ್‌ಗೆ ಒಳಗಾಗಿದ್ದಾರೆ.
ಇರ್ಫಾನ್ ಪಠಾಣ್ ಕೈಗೆ ರಾಖಿ ಕಟ್ಟಿಕೊಂಡಿರುವ ಫೋಟೋವನ್ನು ಇನ್ಸ್‌‌ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 
ಇರ್ಫಾನ್‌ ಪಠಾಣ್ ಮುಸ್ಲಿಂನಾಗಿದ್ದರೂ ರಾಖಿ ಕಟ್ಟಿಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ರಾಖಿ ಕಟ್ಟಿಕೊಂಡಿದ್ದರ ಸಂಬಂಧ ಇರ್ಫಾನ್‌ ಪಠಾಣ್‌ ಅವರನ್ನು ಅನೇಕರು ಟ್ವಿಟ್ಟರ್‌ನಲ್ಲಿ ಟ್ರಾಲ್‌ ಮಾಡ್ತಿದ್ದಾರೆ. 
ಇರ್ಫಾನ್ ತಂದೆ ಓರ್ವ ಮೌಲ್ವಿಯಾಗಿದ್ದಾರೆ. ಆದರೂ ಕ್ರಿಕೆಟರ್‌ ಇಸ್ಲಾಂ ವಿರೋಧಿ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಕೆಲವರು ದೂರಿದ್ದಾರೆ. 
ರಾಖಿ ಹಬ್ಬದ ಹಿನ್ನೆಲೆಯಲ್ಲಿ ಇರ್ಫಾನ್ ಪಠಾಣ್ ಕೈಗೆ ರಾಖಿ ಕಟ್ಟಿಕೊಂಡಿದ್ದ ಫೋಟೋವನ್ನು ಪೋಸ್ಟ್ ಮಾಡಿ, ಶುಭಾಶಯ ತಿಳಿಸಿದ್ದರು.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com