ಅಸಾಧ್ಯ, ಆದರೂ 2019ರ ವಿಶ್ವಕಪ್‌ನಲ್ಲಿ ಭಾರತ ಪರ ಆಡುವುದೇ ನನ್ನ ಕನಸು: ಶ್ರೀಶಾಂತ್

ಸ್ಪಾಟ್ ಫಿಕ್ಸಿಂಗ್ ನಲ್ಲಿ ತೊಡಗಿದ್ದ ಆರೋಪದ ಮೇಲೆ ಜೀವಮಾನ ನಿಷೇಧಕ್ಕೆ ಗುರಿಯಾಗಿದ್ದ ಕ್ರಿಕೆಟರ್ ಶ್ರೀಶಾಂತ್ ಮೇಲಿನ ನಿಷೇಧವನ್ನು ಕೇರಳ ಹೈಕೋರ್ಟ್ ತೆರವುಗೊಳಿಸಿದ...
ಎಸ್ ಶ್ರೀಶಾಂತ್
ಎಸ್ ಶ್ರೀಶಾಂತ್
ನವದೆಹಲಿ: ಸ್ಪಾಟ್ ಫಿಕ್ಸಿಂಗ್ ನಲ್ಲಿ ತೊಡಗಿದ್ದ ಆರೋಪದ ಮೇಲೆ ಜೀವಮಾನ ನಿಷೇಧಕ್ಕೆ ಗುರಿಯಾಗಿದ್ದ ಕ್ರಿಕೆಟರ್ ಶ್ರೀಶಾಂತ್ ಮೇಲಿನ ನಿಷೇಧವನ್ನು ಕೇರಳ ಹೈಕೋರ್ಟ್ ತೆರವುಗೊಳಿಸಿದ ಬೆನ್ನಲ್ಲೇ, ನಾನು 2019ರ ವಿಶ್ವಕಪ್ ಕ್ರಿಕೆಟ್ ಮೇಲೆ ಕಣ್ಣಿಟ್ಟಿದ್ದು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವುದೇ ಈಗ ನನ್ನ ಕ್ರಿಕೆಟ್ ಬದುಕಿನ ಮಹದಾಸೆ ಎಂದು ಹೇಳಿದ್ದಾರೆ. 
2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯುವುದು ಅಸಾಧ್ಯದ ಮಾತು. ಹಾಗಿದ್ದರೂ ಒಂದು ವೇಳೆ ನಾನು 2019ರ ವಿಶ್ವಕಪ್ ಕ್ರಿಕೆಟ್ ಪಂದ್ಯವನ್ನು ಆಡಿದೆನೆಂದಾರೆ ಅದು ನಿಜಕ್ಕೂ ಒಂದು ಪವಾಡವೇ ಸರಿ, ಅಂತಹ ಒಂದು ಪವಾಡ ಸಂಭವಿಸಲಿ ಎಂಬ ಆಶಾವಾದ ಹೊಂದಿದ್ದೇನೆ ಎಂದು 34 ವರ್ಷದ ಶ್ರೀಶಾಂತ್ ಹೇಳಿದ್ದಾರೆ. 
ಪಾಕಿಸ್ತಾನ ಮಾಜಿ ಆಟಗಾರರಾದ ಮಿಸ್ಬಾ ಉಲ್ ಹಕ್, ಯೂನಿಸ್ ಖಾನ್ ಮತ್ತು ಸಚಿನ್ ಪಾಜಿ ಇವರೆಲ್ಲ 40ರ ಹರೆಯದಲ್ಲೂ ಕ್ರಿಕೆಟ್ ಆಡಿದ್ದಾರೆ. ಅವರೇ ನನಗೆ ಪ್ರೇರಣೆ ಎಂದು ಶ್ರೀಶಾಂತ್ ಹೇಳಿದ್ದಾರೆ. 
ಸ್ಪಾಟ್ ಫಿಕ್ಸಿಂಗ್ ಆರೋಪದ ಮೇಲೆ ರಾಜಸ್ಥಾನ ರಾಯಲ್ಸ್ ತಂಡದ ಮಾಜಿ ಆಟಗಾರ ಶ್ರೀಶಾಂತ್ ಅವರ ಮೇಲೆ ಬಿಸಿಸಿಐ ಅಜೀವ ನಿಷೇಧ ಹೇರಿತ್ತು. ಈ ಪ್ರಕರಣ ಸಂಬಂಧ ದೆಹಲಿ ಪೊಲೀಸರು ನೀಡಿದ ಮಾಹಿತಿಯ ಆಧಾರದ ಮೇಲೆ ಬಿಸಿಸಿಐ ಅಜೀವ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಶ್ರೀಶಾಂತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ಏಪ್ರಿಲ್ ನಲ್ಲಿ ಬಿಸಿಸಿಐ ಶ್ರೀಶಾಂತ್ ಮೇಲಿನ ಆಜೀವ ನಿಷೇಧವನ್ನು ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿತ್ತು. ಪ್ರಕರಣ ಸಂಬಂಧ ಸಾಕ್ಷ್ಯಾಧಾರದ ಕೊರತೆಯಿಂದಾಗಿ 2015ರಲ್ಲಿ ದೆಹಲಿ ನ್ಯಾಯಾಲಯ ಶ್ರೀಶಾಂತ್ ರನ್ನು ದೋಷಮುಕ್ತಗೊಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com