56 ವರ್ಷಗಳಿಂದ ನಡೆದುಕೊಂಡು ಬಂದ ದುಲೀಪ್ ಟ್ರೋಫಿ ಕೈಬಿಟ್ಟ ಬಿಸಿಸಿಐ?

56 ವರ್ಷಗಳಿಂದ ನಡೆಯುತ್ತಿರುವ ದುಲೀಪ್ ಟ್ರೋಫಿಯನ್ನು ಕೈಬಿಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿರ್ಧರಿಸಿದೆ ಎಂದು ಮೂಲಗಳಿಂದ...
ಕ್ರಿಕೆಟ್
ಕ್ರಿಕೆಟ್
ಮುಂಬೈ: 56 ವರ್ಷಗಳಿಂದ ನಡೆಯುತ್ತಿರುವ ದುಲೀಪ್ ಟ್ರೋಫಿಯನ್ನು ಕೈಬಿಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 
2017-18ರ ದೇಸಿ ಕ್ರಿಕೆಟ್ ವೇಳಾಪಟ್ಟಿ ಸಿದ್ಧಿಗೊಂಡಿದ್ದು ಅದರಲ್ಲಿ ದುಲೀಪ್ ಟ್ರೋಫಿ ಕುರಿತ ಮಾಹಿತಿ ಲಭ್ಯವಿಲ್ಲ. ಹೀಗಾಗಿ ದುಲೀಪ್ ಟ್ರೋಫಿ ಕೈಬಿಡಲಾಗಿದೆ ಎಂಬ ಅನುಮಾನ ಮೂಡಿದೆ. 
ಅಕ್ಟೋಬರ್ 6ರಿಂದ ರಣಜಿ ಆರಂಭಗೊಳ್ಳಲಿದ್ದು 2018ರ ಮಾರ್ಚ್ 18ಕ್ಕೆ ದೇವಧಾರ್ ಟ್ರೋಫಿಯೊಂದಿಗೆ ದೇಸಿ ಋತು ಮುಕ್ತಾಯಗೊಳ್ಳಲಿದೆ. ಇನ್ನು ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಭಾರತ, ಆಸ್ಟ್ರೇಲಿಯಾ ನಡುವೆ ಸೀಮಿತ ಓವರ್ ಗಳ ಸರಣಿ ನಡೆಯಲಿದ್ದು, ಭಾರತ ಎ ತಂಡ ಸಹ ಸರಣಿಯಲ್ಲಿ ಭಾಗಿಯಾಗಲಿದ್ದು ಈ ಹಿನ್ನೆಲೆಯಲ್ಲಿ ದುಲೀಪ್ ಟ್ರೋಫಿ ಕೈಬಿಡಲು ಬಿಸಿಸಿಐ ತೀರ್ಮಾನಿಸಿದೆ. 
ಇನ್ನು ಮೊಟ್ಟ ಮೊದಲ ಬಾರಿಗೆ 2016ರಲ್ಲಿ ನಡೆದ ದುಲೀಪ್ ಟ್ರೋಫಿಯಲ್ಲಿ ಗುಲಾಬಿ ಬಣ್ಣದ ಚೆಂಡನ್ನು ಬಳಸಿದ್ದನ್ನು ಇಲ್ಲಿ ಸ್ಮರಿಸಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com