ನನ್ನ ವೈಫಲ್ಯಗಳು ನನಗೆ ಪಾಠವಾಗಿದೆ: ಶಿಖರ್ ಧವನ್

ಶಿಖರ್ ಧವನ್ ತಮ್ಮಿಂದಾದ ಸಾಧನೆಗಳಿಂದ ಸಂತಸಗೊಂಡಿದ್ದಾರೆ. ಆದರೆ ಆರಂಭಿಕ ಆಟಗಾರನಾಗಿರುವ ಇವರು ತಂಡದಿಂದ ಹೊರಗುಳಿದ ಸಮಯವನ್ನು ಮರೆಯಲಿಲ್ಲ,
ಶಿಖರ್ ಧವನ್
ಶಿಖರ್ ಧವನ್
ಡಂಬುಲಾ: ಶಿಖರ್ ಧವನ್ ತಮ್ಮಿಂದಾದ ಸಾಧನೆಗಳಿಂದ ಸಂತಸಗೊಂಡಿದ್ದಾರೆ. ಆದರೆ ಆರಂಭಿಕ ಆಟಗಾರನಾಗಿರುವ ಇವರು ತಂಡದಿಂದ ಹೊರಗುಳಿದ ಸಮಯವನ್ನು ಮರೆಯಲಿಲ್ಲ, ವಿಫಲತೆಗಳು ಅವರಿಗೆ ಪಾಠಗಳನ್ನು ಕಲಿಸಿವೆ..
ಕಳೆದ ವರ್ಷದ ನ್ಯೂಜಿಲೆಂಡ್‌ ಪ್ರವಾಸದ ಬಳಿಕ ಧವನ್‌ ತಂಡದಿಂದ ಹೊರ ಉಳಿದಿದ್ದರು. ನಂತರ ಈ ವರ್ಷ ನಡೆದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ವೇಳೆ ತಂಡಕ್ಕೆ ಮರಳಿದರು. ಅಲ್ಲಿಂದೀಚಿನ ಎಲ್ಲಾ ಪಂದ್ಯಗಳಲ್ಲಿಯೂ ಾವರು ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.
‘ನಮ್ಮ ವೈಫಲ್ಯಗಳು ನಮಗೆ ಪಾಠ ಕಲಿಸುತ್ತವೆ. ಇದರಿಂದ ನಾನು ಹೆಚ್ಚು ಕಲಿತಿದ್ದೇನೆ’ ಎನ್ನುವ ಶಿಖರ್ ಧವನ್  2019ರ ವಿಶ್ವಕಪ್‌ ಟೂರ್ನಿಗೆ ಆಯ್ಕೆಯಾಗಬೇಕಾದರೆ ಇದೇ ಫಾರ್ಮ್ ಕಾಯ್ದುಕೊಳ್ಳುವ ಅಗತ್ಯವಿದೆ. ಇಲ್ಲವಾದರೆ ನನ್ನ ಸ್ಥಾನವನ್ನು ಯಾವುದೇ ಉತ್ತಮ ಆತಗಾರರು ತುಂಬುತ್ತಾರೆ. ವಿಶ್ವಕಪ್‌ ಗುರಿಯೊಂದಿಗೆ ಆಟದಲ್ಲಿ ಮತ್ತಷ್ಟು ಸುಧಾರಣೆ ಕಂಡುಕೊಳಳಬೇಕಿದೆ" ಎಂದು ಅವರು ತಿಳಿಸಿದರು.
ತಾನು ಅನುಭವಿಸಿದ ಕುಸಿತದ ಬಗ್ಗೆ ಮಾತನಾಡಿದ ಧವನ್, "ನಾನು ಈಗಾಗಲೇ ಕುಸಿತವನ್ನು ಕಂಡಿದ್ದೇನೆ ಹಾಗಾಗಿ ನಾನು ಅದರ ಬಗ್ಗೆ ಯೋಚಿಸುವುದಿಲ್ಲ ಅದು ಬಂದಾಗ ಬರಲಿ" ಎನ್ನುತ್ತಾರೆ.
ನಿನ್ನೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಧವನ್ ಮತ್ತು ಕೊಹ್ಲಿ ಅವರ ಜತೆಯಾಟದ(197 ರನ್‌) ಬಲದಿಂದ ಭಾರತ ತಂಡ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ 9 ವಿಕೆಟ್ ಗಳಿಂದ ಜಯ ದಾಖಲಿಸಿತ್ತು..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com