ಜೋಹಾನ್ಸ್ ಬರ್ಗ್: ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾದ ಏಕದಿನ ತಂಡದ ನಾಯಕತ್ವವನ್ನು ತ್ಯಜಿಸಿದ್ದಾರೆ.
ಇನ್ನು ಅಕ್ಟೋಬರ್ ನಿಂದ ಮೂರು ಮಾದರಿಯಲ್ಲೂ ಆಡಲು ತಾವು ಸಿದ್ಧರಿರುವುದಾಗಿ ಹೇಳಿವ ಮೂಲಕ ನಿವೃತ್ತಿ ಉಹಾಪೋಹಗಳಿಗೆ ಎಬಿ ಡಿವಿಲಿಯರ್ಸ್ ತೆರೆ ಎಳೆದಿದ್ದಾರೆ.
2004ರಿಂದ ನಿರಂತರವಾಗಿ ಮೂರು ಮಾದರಿಯಲ್ಲಿ ತೊಡಗಿಸಿಕೊಂಡು ದಣಿದಿದ್ದೇನೆ. ಆದರೆ ದೇಶವನ್ನು ಪ್ರತಿನಿಧಿಸಬೇಕು ಎನ್ನುವ ಹಂಬಲ ನನ್ನಲ್ಲಿ ಇನ್ನೂ ಇದೆ. ಡುಪ್ಲೆಸಿ ಟೆಸ್ಟ್ ಹಾಗೂ ಟಿ20 ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ ಎಂದರು.