ಪಂದ್ಯವನ್ನು 47 ಓವರುಗಳಿಗೆ ತಗ್ಗಿಸಿದರೂ ಶ್ರೀಲಂಕಾವು ನಿಧಾನ ಗತಿಯ ಓವರ್ ರೇಟ್ ನೀಡಿದ್ದು ನಾಯಕ ತರಂಗ ಪಾಲಿಗೆ ಮುಳುವಾಗಿದೆ. ಶ್ರೀಲಂಕಾ ಏಕದಿನ ತಂಡದ ನಾಯಕ ಉಪುಲ್ ತರಂಗ ಮೇಲೆ ನಿಧಾನ ಗತಿಯ ಓವರ್ ರೇಟ್ ಗಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎರಡು ಪಂದ್ಯಗಳ ನಿಷೇಧ ಹೇರಿದೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತವು 2-0 ಮುನ್ನಡೆ ಸಾಧಿಸಿದೆ.