
ಪಳ್ಳೆಕಿಲೆ: 3ನೇ ಏಕದಿನ ಪಂದ್ಯದಲ್ಲೂ ಶ್ರೀಲಂಕಾ ವಿರುದ್ಧ ಭಾರತ ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಶ್ರೀಲಂಕಾ ನೀಡಿದ 218 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 45.1 ಓವರ್ ನಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು 218 ರನ್ ಗಳಿಸಿ ಗುರಿ ಸಾಧಿಸಿ ಸತತ ಮೂರನೇ ಜಯಸಾಧಿಸಿತು. ಆ ಮೂಲಕ 5 ಪಂದ್ಯಗಳ ಸರಣಿಯನ್ನು ಕೊಹ್ಲಿ ಪಡೆ ಇನ್ನೂ 2 ಪಂದ್ಯ ಭಾಕಿ ಇರುವಂತೆಯೇ ತನ್ನದಾಗಿಸಿಕೊಂಡಿತು. ಭಾರತದ ಪರ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅಜೇಯ 124 ರನ್ ಗಳನ್ನು ಸಿಡಿಸುವ ಮೂಲಕ ಗೆಲುವಿನ ರೂವಾರಿಯಾದರು, ರೋಹಿತ್ ಶರ್ಮಾ ಒಟ್ಟು 145 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 16 ಬೌಂಡರಿಗಳ ಸಹಾಯದಿಂದ ಒಟ್ಟು 124 ರನ್ ಸಿಡಿಸಿದ್ದರು. ರೋಹಿತ್ ಗೆ ಅತ್ಯುತ್ತಮ ಸಾಥ್ ನೀಡಿದ ಮಹೇಂದ್ರ ಸಿಂಗ್ ಧೋನಿ ಅಜೇಯ 67 ರನ್ ಸಿಡಿಸಿದರು. ಧೋನಿ ಒಟ್ಟು 86 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿಗಳ ಸಹಾಯದಿಂದ ಅರ್ಧಶತಕ ಸಡಿಸಿದ್ದರು.
ಅಂತಿಮವಾಗಿ ಭಾರತ 45.1 ಓವರ್ ನಲ್ಲಿ 218 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಶ್ರೀಲಂಕಾ ಪರ ಅಕಿಲ ಧನಂಜಯ 2 ವಿಕೆಟ್ ಕಬಳಿಸಿ ಉತ್ತಮ ಸ್ಪೆಲ್ ಮಾಡಿದರು. ಅಂತೆಯೇ ಲಸಿತ್ ಮಾಲಿಂಗ ಹಾಗೂ ಫರ್ನಾಂಡೋ ತಲಾ ಒಂದು ವಿಕೆಟ್ ಪಡೆದರು.
Advertisement