
ಜೊಹಾನ್ಸ್ ಬರ್ಗ್: ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದ ವೇಳೆ ಜೇನುನೊಣಗಳು ಆಟಗಾರರ ಮೇಲೆ ದಾಳಿ ಮಾಡಿದಂತಾ ಘಟನೆ ವರದಿಯಾಗಿದೆ.
ಜೊಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿದ್ದ 3ನೇ ಏಕದಿನ ಪಂದ್ಯದ ವೇಳೆ ಜೇನುನೊಣಗಳು ದಾಳಿ ಮಾಡಿದ್ದು ಜೇನುನೊಣಗಳಿಂದ ತಪ್ಪಿಸಿಕೊಳ್ಳಲು ಆಟಗಾರರು ನೆಲದ ಮೇಲೆ ಮಲಗಿದ್ದರು. ಇದರಿಂದ ಸರಿಸುಮಾರು 1 ಗಂಟೆ ಕಾಲ ಆಟಕ್ಕೆ ಅಡಚಣೆ ಉಂಟಾಗಿತ್ತು.
ಶ್ರೀಲಂಕಾ ಬ್ಯಾಟಿಂಗ್ ಮಾಡುತ್ತಿದ್ದಾಗ 25ನೇ ಓವರ್ ನಲ್ಲಿ 4ನೇ ವಿಕೆಟ್ ಕಳೆದುಕೊಂಡಿತ್ತು. ಬಳಿಕ ಕ್ರೀಸ್ ಗೆ ಇಳಿದ ಅಸೆಲ ಗುಣರತ್ನೆ ಮೊದಲ ಎಸೆತ ಎದುರಿಸಲು ಸಿದ್ಧರಾದಾಗ ಜೇನುನೊಣ ನುಗ್ಗಿದರಿಂದ ಸ್ಲಿಪ್ ನಲ್ಲಿದ್ದ ಫೀಲ್ಡರ್ ಗಳು ಮೈದಾನದಲ್ಲೇ ಮಲಗಿ ರಕ್ಷಣೆ ಪಡೆದರು. ನಂತರ ಆಟ ಮುಂದುವರಿದರೂ 27ನೇ ಓವರ್ ವೇಳೆ ಜೇನುನೊಣಗಳ ಹಿಂಡು ಮತ್ತೆ ದಾಳಿ ಮಾಡಿದ್ದರಿಂದ ಅಂಪೈರ್ ಗಳು ಆಟ ನಿಲ್ಲಿಸಿದರು.
Advertisement