ಕುಂಬ್ಳೆ 10 ವಿಕೆಟ್ ಪಡೆದ ಸಾಧನೆ ಮಾಡಿದ್ರೆ, ಸೆಹ್ವಾಗ್ ವಾಸೀಂ ಅಕ್ರಂಗೆ ಥ್ಯಾಂಕ್ಸ್ ಹೇಳಿದ್ದೇಕೆ?

ಟೀಂ ಇಂಡಿಯಾದ ಮಾಜಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ ನ ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಪಡೆದು ವಿಶ್ವದಾಖಲೆ ಮಾಡಿದ್ದು ನಿನ್ನೆಗೆ ಬರೋಬ್ಬರಿ...
ಅನಿಲ್ ಕುಂಬ್ಳೆ-ವೀರೇಂದ್ರ ಸೆಹ್ವಾಗ್-ವಾಸಿಂ ಅಕ್ರಂ
ಅನಿಲ್ ಕುಂಬ್ಳೆ-ವೀರೇಂದ್ರ ಸೆಹ್ವಾಗ್-ವಾಸಿಂ ಅಕ್ರಂ
ನವದೆಹಲಿ: ಟೀಂ ಇಂಡಿಯಾದ ಮಾಜಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ ನ ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಪಡೆದು ವಿಶ್ವದಾಖಲೆ ಮಾಡಿದ್ದು ನಿನ್ನೆಗೆ ಬರೋಬ್ಬರಿ 18 ವರ್ಷಗಳಾಗಿದ್ದು ಇದಕ್ಕೆ ವೀರೇಂದ್ರ ಸೆಹ್ವಾಗ್ ವಾಸೀಂ ಅಕ್ರಂಗೆ ಥ್ಯಾಂಕ್ಸ್ ಹೇಳಿದ್ದಾರೆ. 
ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟರ್ ಅಕೌಂಟ್ ನಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ವಾಸೀಂ ಅಕ್ರಂಗೆ ಧನ್ಯವಾದ ಹೇಳಿದ್ದಾರೆ. ಅದಕ್ಕೆ ಕಾರಣ, 1999ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ್ದರು. ಕುಂಬ್ಳೆ ಪಾಕಿಸ್ತಾನ 9 ವಿಕೆಟ್ ಪಡೆದಿದ್ದರು. ವಿಶ್ವದಾಖಲೆ ಮಾಡಲು ಇನ್ನು ಒಂದು ವಿಕೆಟ್ ಮಾತ್ರ ಬಾಕಿಯಿತ್ತು. ಈ ವೇಳೆ ಬ್ಯಾಟಿಂಗ್ ಮಾಡುತ್ತಿದದ್ದು, ವಾಸೀಂ ಅಕ್ರಂ ಮತ್ತು ವಕಾರ್ ಯುನೀಸ್. 
ಈ ವೇಳೆ ವಕಾರ್ ಯೂನೀಸ್ ವಾಸಿಂ ಅಕ್ರಂ ಅವರ ಹತ್ತಿರ ಬಂದು ರನ್ ಔಟ್ ಆಗುವುದೇ ಹೇಗೆ ಅಂತ ಕೇಳಿದ್ದರಂತೆ. ಅದಕ್ಕೆ ವಾಸಿಂ ಅಕ್ರಂ ರನ್ ಔಟ್ ಆಗುವುದು ಬೇಡ, ಖಂಡಿತವಾಗಿ ಕುಂಬ್ಳೆಗೆ ವಿಕೆಟ್ ಒಪ್ಪಿಸುವುದಿಲ್ಲ ಎಂಬ ಭರವಸೆ ಇತ್ತು ಎಂದು ವಾಸಿಂ ಅವರೇ ಹೇಳಿಕೊಂಡಿದ್ದರು ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ಒಂದು ವೇಳೆ ವಕಾರ್ ಯೂನಿಸ್ ಮಾತು ಕೇಳಿ ವಾಸಿಂ ಅಕ್ರಂ ರನ್ ಔಟ್ ಆಗಿದ್ದರೇ ಅನಿಲ್ ಕುಂಬ್ಳೆ ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕಾಗಿಯೇ ಸೆಹ್ವಾಗ್ ವಾಸಿಂ ಅಕ್ರಂಗೆ ಧನ್ಯವಾದ ಹೇಳಿರುವುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com