ಅಂಧರ ಟಿ20 ವಿಶ್ವಕಪ್ ಫೈನಲ್: ಸಾಂಪ್ರದಾಯಿಕ ಎದುರಾಳಿ ಪಾಕ್ ಜತೆ ಭಾರತ ಸಮರ

ಅಂಧರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ...
ಟೀಂ ಇಂಡಿಯಾ, ಪಾಕಿಸ್ತಾನ
ಟೀಂ ಇಂಡಿಯಾ, ಪಾಕಿಸ್ತಾನ
ಬೆಂಗಳೂರು: ಅಂಧರ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. 
2012ರ ಅಂಧರ ಟಿ20 ವಿಶ್ವಕಪ್ ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು ಇದರಲ್ಲಿ ಭಾರತ 29 ರನ್ ಗಳಿಂದ ಪಾಕಿಸ್ತಾನವನ್ನು ಮಣಿಸಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟಿತ್ತು. ಇದೀಗ ಮತ್ತೆ ಉಭಯ ತಂಡಗಳು ವಿಶ್ವ ಕಿರೀಟಕ್ಕಾಗಿ ಹೋರಾಡಲಿವೆ. 
ಟೂರ್ನಿಯಲ್ಲಿ ಒಟ್ಟು 9 ಪಂದ್ಯಗಳಲ್ಲಿ ಗೆದ್ದು ಅಮೋಘ ಫಾರ್ಮ್ ನಲ್ಲಿರುವ ಭಾರತ ಪ್ರಶಸ್ತಿಗಾಗಿ ಸಾಮರ್ಥ್ಯ ಮೀರಿದ ನಿರ್ವಹಣೆ ನೀಡುವುದು ಅಗತ್ಯ. ಲೀಗ್ ನಲ್ಲಿ ಪಾಕ್ ವಿರುದ್ಧ 7 ವಿಕೆಟ್ ಗಳಿಂದ ಸೋತಿರುವುದೇ ಅತಿಥೇಯ ಬಳಗಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು ಬೆಳಗ್ಗೆ 11 ಗಂಟೆಗೆ ಪಂದ್ಯ ಆರಂಭಗೊಳ್ಳಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com