ಬಿಸಿಸಿಐ ನಿಷೇಧದ ನಡುವೆ ಮತ್ತೆ ಕ್ರಿಕೆಟ್‌ಗೆ ಶ್ರೀಶಾಂತ್ ಎಂಟ್ರಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿಷೇಧದ ನಡುವೆ ಮಾಜಿ ವೇಗಿ ಶ್ರೀಶಾಂತ್ ಇದೀಗ ಎರ್ನಾಕುಳಂನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವನ್ನು ಆಡಲು...
ಶ್ರೀಶಾಂತ್
ಶ್ರೀಶಾಂತ್
ಕೊಚ್ಚಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ನಿಷೇಧದ ನಡುವೆ ಮಾಜಿ ವೇಗಿ ಶ್ರೀಶಾಂತ್ ಇದೀಗ ಎರ್ನಾಕುಳಂನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯವನ್ನು ಆಡಲು ಸಿದ್ಧತೆ ನಡೆಸಿದ್ದಾರೆ. 
ಫೆಬ್ರವರಿ 19 ರಿಂದ 2 ದಿನದ ಪಂದ್ಯ ಆರಂಭವಾಗಲಿದೆ. ಇದರಲ್ಲಿ ಎರ್ನಾಕುಳಂ ಕ್ಲಬ್ ತಂಡದ ಪರ ಶ್ರೀಶಾಂತ್ ಆಡಲಿದ್ದಾರೆ. 2013ರ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಸಿಕ್ಕಿಬಿದ್ದಿದ್ದ ಶ್ರೀಶಾಂತ್ ಗೆ ಬಿಸಿಸಿಐ ನಾಲ್ಕು ವರ್ಷ ನಿಷೇಧ ಶಿಕ್ಷೆ ನೀಡಿತ್ತು. ಇದೀಗ ನಾಲ್ಕು ವರ್ಷಗಳ ಬಳಿಕ ಶ್ರೀಶಾಂತ್ ಕ್ರಿಕೆಟ್ ಗೆ ಮರಳಿಸಿದ್ದಾರೆ. 
ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ನ್ಯಾಯಾಲಯ ನಿರಪರಾಧಿ ಎಂದು ಘೋಷಿಸಿದ್ದರು. ಬಿಸಿಸಿಐ ಮಾತ್ರ ಸಡಿಲ ನಿರ್ಧಾರ ತೆಗೆದುಕೊಂಡಿರಲಿಲ್ಲ. ಇತ್ತೀಚೆಗಷ್ಟೇ ಸ್ಕಾಟ್ಲೆಂಡ್ ಲೀಗ್ ನಲ್ಲಿ ಪಾಲ್ಗೊಳ್ಳಲು ನಿರಾಕ್ಷೇಪಣಾ ಪತ್ರ ನೀಡಿ ಎಂದು ಬಿಸಿಸಿಐಗೆ ಶ್ರೀಶಾಂತ್ ಮನವಿ ಮಾಡಿದ್ದರು ಇದಕ್ಕೆ ಬಿಸಿಸಿಐ ಖ್ಯಾರೆ ಎಂದಿರಲಿಲ್ಲ. 
ಇನ್ನು ಎರ್ನಾಕುಳಂ ಪರ ಆಡುತ್ತಿರುವುದನ್ನು ಖಚಿತಪಡಿಸಿರುವ ಶ್ರೀಶಾಂತ್ ನನ್ನ ವಿರುದ್ಧ ಆಜೀವನ ನಿಷೇಧಕ್ಕೆ ಬಿಸಿಸಿಐನಿಂದ ಯಾವುದೇ ಅಧಿಕೃತ ಪತ್ರಗಳು ಇಲ್ಲ, ಮತ್ತೆ ನಾನೇಕೆ ಚಿಂತಿಸಬೇಕು. ಆಡಲು ಸಿದ್ಧನಾಗಿರುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com