ಪುಮಾ ಜತೆ ದಾಖಲೆ ಒಪ್ಪಂದ: ಬೋಲ್ಟ್ ಅಭಿನಂದನೆಗೆ ಕೊಹ್ಲಿ ಧನ್ಯವಾದ

ಜಾಗತಿಕ ಕ್ರೀಡಾ ಪರಿಕರಗಳ ಪೂರೈಕೆದಾರ ಸಂಸ್ಥೆ ಜರ್ಮನಿಯ ಪೂಮಾ ಜತೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬರೋಬ್ಬರಿ 110 ಕೋಟಿ ರುಪಾಯಿ...
ಉಸೇನ್ ಬೋಲ್ಟ್-ವಿರಾಟ್ ಕೊಹ್ಲಿ
ಉಸೇನ್ ಬೋಲ್ಟ್-ವಿರಾಟ್ ಕೊಹ್ಲಿ
ನವದೆಹಲಿ: ಜಾಗತಿಕ ಕ್ರೀಡಾ ಪರಿಕರಗಳ ಪೂರೈಕೆದಾರ ಸಂಸ್ಥೆ ಜರ್ಮನಿಯ ಪೂಮಾ ಜತೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬರೋಬ್ಬರಿ 110 ಕೋಟಿ ರುಪಾಯಿ ಜಾಹಿರಾತ್ ಒಪ್ಪಂದ ಮಾಡಿಕೊಂಡಿರುವುದಕ್ಕೆ ವಿಶ್ವದ ವೇಗ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಅಭಿನಂದನೆ ಸಲ್ಲಿಸಿದ್ದು ಇದಕ್ಕೆ ಕೊಹ್ಲಿ ಧನ್ಯವಾದಗಳನ್ನು ತಿಳಿಸಿದ್ದಾರೆ. 
ಪೂಮಾ ಜತೆ ಎಂಟು ವರ್ಷಗಳಿಗೆ ಒಪ್ಪಂದ ಮಾಡಿಕೊಂಡಿರುವ ಭಾರತ ಮೊದಲ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿರುವ ವಿರಾಟ್ ಕೊಹ್ಲಿಯನ್ನು ಪೂಮಾದ ಜಾಗತಿಕ ರಾಯಭಾರತ್ವ ಹೊಂದಿರುವ ಉಸೇನ್ ಬೋಲ್ಟ್ ಅಭಿನಂದಿಸಿದ್ದರು. 
ಪೂಮಾ ಜಾಗತಿಕ ರಾಯಭಾರತ್ವಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವ ವಿರಾಟ್ ಕೊಹ್ಲಿ ಅವರಿಗೆ ಧನ್ಯವಾದ. ಇದೊಂದು ಅತ್ಯುತ್ತಮ ಆಯ್ಕೆ ಎಂದು ಉಸೇನ್ ಬೋಲ್ಟ್ ಕೊಹ್ಲಿಗೆ ಟ್ವೀಟ್ ಮಾಡಿದ್ದರು.
ಇದಕ್ಕೆ ರೀಟ್ವೀಟ್ ಮಾಡಿದ ವಿರಾಟ್ ಕೊಹ್ಲಿ ಧನ್ಯವಾದ ದಿಗ್ಗಜ ಎಂದು ಉಸೇನ್ ಬೋಲ್ಟ್ ಗೆ ಟ್ವೀಟಿಸಿದ್ದಾರೆ.
ವಿರಾಟ್ ಕೊಹ್ಲಿಯಂತೆ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಹ ನೂರು ಕೋಟಿ ಜಾಹಿರಾತು ಒಪ್ಪಂದ ಕ್ಲಬ್ ನಲ್ಲಿದ್ದಾರೆ. ಇವರಿಬ್ಬರು ಆಟಗಾರರು ವಿವಿಧ ಬ್ರಾಂಡ್ ಸಂಸ್ಥೆಗಳ ಜತೆ ಹಲವು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದರು. ಆದರೆ ವಿರಾಟ್ ಕೊಹ್ಲಿ ಒಂದೇ ಸಂಸ್ಥೆ ಜತೆ 100 ಕೋಟಿ ಒಪ್ಪಂದ ಮಾಡಿಕೊಂಡಿದ್ದು ಇದೊಂದು ದಾಖಲೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com