ಟೀಂ ಇಂಡಿಯಾ ಜೆರ್ಸಿ ಪ್ರಾಯೋಜಕತ್ವದಿಂದ ಹಿಂದೆ ಸರಿದ ಸ್ಟಾರ್ ಸ್ಪೋಟ್ಸ್

ಮಾರ್ಚ್ 1 ರಿಂದ ಬಿಸಿಸಿಐನೊಂದಿಗಿನ ಟೀಂ ಇಂಡಿಯಾದ ಜೆರ್ಸಿ ಒಪ್ಪಂದ ಮುಗಿಯಲಿದ್ದು ನಂತರ ಜೆರ್ಸಿ ಪ್ರಾಯೋಜಕತ್ವದಿಂದ ಹಿಂದೆ ಸರಿಯುವುದಾಗಿ ಸ್ಟಾರ್...
ಸ್ಟಾರ್ ಸ್ಪೋರ್ಟ್ಸ್
ಸ್ಟಾರ್ ಸ್ಪೋರ್ಟ್ಸ್
ಮುಂಬೈ: ಮಾರ್ಚ್ 1 ರಿಂದ ಬಿಸಿಸಿಐನೊಂದಿಗಿನ ಟೀಂ ಇಂಡಿಯಾದ ಜೆರ್ಸಿ ಒಪ್ಪಂದ ಮುಗಿಯಲಿದ್ದು ನಂತರ ಜೆರ್ಸಿ ಪ್ರಾಯೋಜಕತ್ವದಿಂದ ಹಿಂದೆ ಸರಿಯುವುದಾಗಿ ಸ್ಟಾರ್ ಸ್ಪೋಟ್ಸ್ ವಾಹಿನಿ ತಿಳಿಸಿದೆ. 
ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿ ಮಾಡಬೇಕೆಂಬ ಸುಪ್ರೀಂಕೋರ್ಟ್ ಆದೇಶ, ಜತೆಗೆ ಇತ್ತೀಚೆಗಷ್ಟೇ ಭಾರತ ಟೆಸ್ಟ್ ತಂಡದ ಹೀನಾಯ ಸೋಲಿನ ಕಾರಣ ಸ್ಟಾರ್ ಸ್ಪೋಟ್ಸ್ ಒಪ್ಪಂದದ ಅವಧಿ ಮುಗಿದೊಡನೆ ತಾನು ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ತೀರ್ಮಾನಿಸಿದೆ. 
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿಬಂಧನೆಗಳು ಅಸ್ಪಷ್ಟವಾಗಿವೆ, ಅಷ್ಟೇ ಕಷ್ಟದ್ದಾಗಿವೆ. ಆದ್ದರಿಂದ ತಾನು ಹಿಂದೆ ಸರಿಯುವುದಾಗಿ ಸ್ಟಾರ್ ಸ್ಪೋಟ್ಸ್ ಹೇಳಿಕೊಂಡಿದೆ. ಸ್ಟಾರ್ ಸ್ಪೋಟ್ಸ್ ವಾಹಿನಿ ಬಿಸಿಸಿಐನೊಂದಿಗೆ ಎಲ್ಲ ಅಂತಾರಾಷ್ಟ್ರೀಯ ಪಂದ್ಯಗಳನ್ನು ನೇರಪ್ರಸಾರ ಮಾಡುವ ಒಪ್ಪಂದ ಮಾಡಿಕೊಂಡಿದ್ದು ಸ್ಟಾರ್ ಜೆರ್ಸಿ ಪ್ರಾಯೋಜಕತ್ವವನ್ನೂ ಹೊಂದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com