ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೂ ತಟ್ಟಿದ ಲೋಧಾ ಸಮಿತಿ ವರದಿ ಬಿಸಿ

ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವಂತೆ ಸುಪ್ರೀಂ ಕೋರ್ಟ್ ಆದೇಶವನ್ನು ಕೆಎಸ್ ಸಿಎ ಪಾಲಿಸಿದೆ. ಅದರ ...
ಬ್ರಿಜೇಶ್ ಪಟೇಲ್ ಮತ್ತು ಕೆಎಸ್ ಸಿಎ ಅಧ್ಯಕ್ಷ ಅಶೋಕಾನಂದ,
ಬ್ರಿಜೇಶ್ ಪಟೇಲ್ ಮತ್ತು ಕೆಎಸ್ ಸಿಎ ಅಧ್ಯಕ್ಷ ಅಶೋಕಾನಂದ,

ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವಂತೆ ಸುಪ್ರೀಂ ಕೋರ್ಟ್ ಆದೇಶವನ್ನು ಕೆಎಸ್ ಸಿಎ ಪಾಲಿಸಿದೆ. ಅದರ ಅನ್ವಯ ಕೆಎಸ್ ಸಿಎ ಅಧ್ಯಕ್ಷ ಅಶೋಕಾನಂದ, ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಮತ್ತು ಖಜಾಂಚಿ ದಯಾನಂದ ಪೈ ತಮ್ಮ ಸ್ಥಾನವನ್ನು ತೊರೆದಿದ್ದಾರೆ.

ಲೋಧಾ ಸಮಿತಿಯ ಶಿಫಾರಸುಗಳ ಜಾರಿಯಲ್ಲಿ ವಿಳಂಬ ಮಾಡಿದ ಕಾರಣಕ್ಕೆ  ಮಂಗಳವಾರ ಸುಪ್ರೀಂ ಕೋರ್ಟ್ ಅನುರಾಗ್ ಠಾಕೂರ್ ಮತ್ತು  ಅಜಯ್ ಶಿರ್ಕೆ ಅವರನ್ನು  ಬಿಸಿಸಿಐ ಅಧ್ಯಕ್ಷ ಮತ್ತು ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಿತ್ತು.

ನಾವು ಲೋಧಾ ಸಮಿತಿ ಶಿಫಾರಸುಗಳನ್ನು ಜಾರಿಗೆ ತರಲು ಹೊರಟಿದ್ದೇವೆ. ಹೀಗಾಗಿ ಸಂಸ್ಥೆಗೆ ಮಧ್ಯಂತರ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಖಜಾಂಚಿಯನ್ನು ನೇಮಕ ಮಾಡಲು ಜ.5ರಂದು ವಿಶೇಷ ಸಭೆ ನಡೆಯಲಿದೆ, ಈ ಸಭೆಯಲ್ಲಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಕೆಎಸ್ ಸಿಎ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.  

70 ವರ್ಷ ವಯಸ್ಸು ದಾಟಿದವರು ಮತ್ತು ಒಟ್ಟು ಒಂಬತ್ತು ವರ್ಷ (ಮೂರು ವರ್ಷಗಳ ಒಟ್ಟು ಮೂರು ಅವಧಿಗಳಲ್ಲಿ)   ಪದಾಧಿಕಾರಿಯಾಗಿದ್ದವರು ಸಂಸ್ಥೆಯ ಯಾವುದೇ ಹುದ್ದೆಯನ್ನು ಹೊಂದುವಂತಿಲ್ಲ ಎಂಬ ಶಿಫಾರಸುಗಳನ್ನು ಸಮಿತಿಯು ಮಾಡಿದೆ. ಅದರ ಪ್ರಕಾರ  ಅಧ್ಯಕ್ಷ ಅಶೋಕಾನಂದ  ಅವರಿಗೆ 76 ಮತ್ತು ದಯಾನಂದ್ ಪೈ ಅವರಿಗೆ 72 ವರ್ಷ ವಯಸ್ಸಾಗಿದೆ. ಆದ್ದರಿಂದ ಅವರು ಅಧಿಕಾರದಲ್ಲಿ ಮುಂದುವರಿಯುವಂತಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com