
ದಕ್ಷಿಣ ಆಫ್ರಿಕಾ: ಇಂಗ್ಲೀಷ್ ಕೌಂಟಿ ಕ್ರಿಕೆಟ್ ಕ್ಲಬ್ ಹ್ಯಾಂಪ್ ಶೈರ್ ನಲ್ಲಿ ಆಡಲು ಹೆಚ್ಚು ಆಸಕ್ತಿ ವಹಿಸಿರುವ ಆಫ್ರಿಕಾದ ಕೈಲ್ ಅಬೋಟ್ ಮತ್ತು ರಿಲ್ಲಿ ರೋಸ್ಸೋ ಜತೆಗಿನ ಒಪ್ಪಂದವನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ರದ್ದುಗೊಳಿಸಿದ್ದು, ಇದರೊಂದಿಗೆ ಅಬೋಟ್, ರೋಸ್ಸೋ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಅಂತ್ಯಗೊಂಡಿದೆ.
ಅಬೋಟ್, ರೋಸ್ಸೋ ಈ ಇಬ್ಬರು ಆಟಗಾರರು ಹ್ಯಾಂಪ್ ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ನಲ್ಲೇ ಆಡಲು ಹೆಚ್ಚು ಆಸಕ್ತಿ ವಹಿಸಿದ್ದು, ಕೌಂಟಿ ಕ್ರಿಕೆಟ್ ನಲ್ಲಿ ಆಡುತ್ತಲೇ, ಆಫ್ರಿಕಾ ಪರ ಆಡುವ ಇಚ್ಛೆ ವ್ಯಕ್ತಪಡಿಸಿರುವುದು ಆಫ್ರಿಕಾ ಕ್ರಿಕೆಟ್ ಮಂಡಳಿ ಅಸಮ್ಮತಿಗೆ ಕಾರಣವಾಗಿದ್ದು ಈ ಇಬ್ಬರು ಜತೆಗಿನ ಒಪ್ಪಂದವನ್ನು ರದ್ದುಪಡಿಸಿದೆ.
ಆಫ್ರಿಕಾದ ವೇಗಿ ಅಬ್ಬೋಟ್ 11 ಟೆಸ್ಟ್ ಪಂದ್ಯದಲ್ಲಿ 39 ವಿಕೆಟ್, 28 ಏಕದಿನ ಪಂದ್ಯದಲ್ಲಿ 34 ವಿಕೆಟ್ ಮತ್ತು 21 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇನ್ನು ರೋಸ್ಸೋ ಬ್ಯಾಟ್ಸ್ ಮನ್ ಆಗಿದ್ದು 36 ಏಕದಿನ ಪಂದ್ಯ ಪೈಕಿ 1239 ರನ್ ಸಿಡಿಸಿದ್ದು 3 ಶತಕ ಮತ್ತು 7 ಅರ್ಧಶತಕ ಸಿಡಿಸಿದ್ದಾರೆ. 15 ಟಿ20 ಪಂದ್ಯದಲ್ಲಿ 327 ರನ್ ಸಿಡಿಸಿದ್ದು 2 ಅರ್ಧಶತಕ ಸಿಡಿಸಿದ್ದಾರೆ.
Advertisement