ಪಾಕಿಸ್ತಾನದಲ್ಲಿ ಟಿ-20 ಸರಣಿಯ ಪಿಸಿಬಿ ಪ್ರಸ್ತಾಪ ತಿರಸ್ಕರಿಸಿದ ವಿಂಡೀಸ್ ಕ್ರಿಕೆಟ್ ಮಂಡಳಿ
ಬಾರ್ಬೊಡಸ್: ಪಾಕಿಸ್ತಾನದಲ್ಲಿ ಟಿ20 ಕ್ರಿಕೆಟ್ ಸರಣಿಯನ್ನಾಡುವ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಯ ಪ್ರಸ್ತಾಪವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಿರಸ್ಕರಿಸಿದೆ.
2009ರಲ್ಲಿ ಲಾಹೋರ್ ನಲ್ಲಿ ನಡೆದ ಶ್ರೀಲಂಕಾ ಕ್ರಿಕೆಟ್ ಆಟಗಾರರ ಮೇಲಿನ ಉಗ್ರ ದಾಳಿ ಬಳಿಕ ಈ ವರೆಗೂ ಪಾಕಿಸ್ತಾನದಲ್ಲಿ ಒಂದೇ ಒಂದು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಾಗಿಲ್ಲ. ಕಳೆದ 5 ವರ್ಷಗಳಿಂದ ತವರಿನಲ್ಲಿ ಕ್ರಿಕೆಟ್ ಸರಣಿ ಆಯೋಜನೆಗೆ ಪಿಸಿಬಿ ಸತತ ಪ್ರಯತ್ನ ನಡೆಸುತ್ತಿದ್ದರೂ ವಿವಿಧ ದೇಶಗಳಿಂದ ಇದಕ್ಕೆ ಪೂರಕ ಪ್ರತಿಕ್ರಿಯೆ ಬಂದಿಲ್ಲ. ಇದಕ್ಕೆ ವೆಸ್ಟ್ ಇಂಡೀಸ್ ಮತ್ತೊಂದು ಸೇರ್ಪಡೆಯಾಗಿದ್ದು, ಈ ಹಿಂದೆ ಪಾಕಿಸ್ತಾನದಲ್ಲಿ ಟಿ20 ಸರಣಿಯನ್ನಾಡುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಪ್ರಸ್ತಾಪವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಭದ್ರತೆಯ ಕಾರಣವೊಡ್ಡಿ ತಿರಸ್ಕರಿಸಿದೆ.
ಒಂದು ತಿಂಗಳ ಹಿಂದೆಯೇ ಪಿಸಿಬಿ ಈ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತಾದರೂ, ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಎಫ್ ಐಸಿಎ ( Federation of International Cricketers Associations) ಮೊರೆ ಹೋಗಿತ್ತು. ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡುವ ಕುರಿತು ವರದಿ ನೀಡಿರುವ ಎಫ್ ಐಸಿಎ ಸಂಸ್ಥೆ ಪಾಕಿಸ್ತಾನದಲ್ಲಿ ಆಟಗಾರರ ಭದ್ರತೆ ಕುರಿತು ಶಂಕೆ ವ್ಯಕ್ತಪಡಿಸಿದ್ದು, ಆಟಗಾರರ ಭದ್ರತೆ ಕುರಿತಂತೆ ಏನೂ ಹೇಳಲೂ ಸಾಧ್ಯವಿಲ್ಲ ಎಂದು ಹೇಳಿದೆ. ತನ್ನ ಈ ವರದಿಯನ್ನು ವೆಸ್ಟ್ ಇಂಡೀಸ್ ನ ವೆಸ್ಟ್ ಇಂಡೀಸ್ ಪ್ಲೇಯರ್ಸ್ ಅಸೋಷಿಯನ್ ಗೆ ರವಾನಿಸಿದ್ದು, ಡಬಲ್ಯೂ ಐಪಿಎ ವಿಂಡೀಸ್ ಕ್ರಿಕೆಟ್ ಮಂಡಳಿಗೆ ವರದಿಯನ್ನು ರವಾನಿಸಿದೆ.
ಹೀಗಾಗಿ ಪಾಕಿಸ್ತಾನದಲ್ಲಿ ವೆಸ್ಚ್ ಇಂಡೀಸ್ ತಂಡ ಟಿ20 ಸರಣಿಯಲ್ಲಿ ಪರಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ವಿಂಡೀಸ್ ಕ್ರಿಕೆಟ್ ಮಂಡಳಿ ಪಿಸಿಬಿ ಸ್ಪಷ್ಟಪಡಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ