ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ ಮತ್ತು ಪತ್ನಿ ರೇವಾ ಸೋಲಂಕಿ ಪ್ರಯಾಣಿಸುತ್ತಿದ್ದ ಕಾರು ಜಾಮಾನಗರದಲ್ಲಿ ಅಪಘಾತಕ್ಕೊಳಗಾಗಿದ್ದು ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಜಡೇಜಾ ಪ್ರಯಾಣಿಸುತ್ತಿದ್ದ ಕಾರು ಮೊಪೆಡ್ ವೊಂದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಆದರೆ ಇಬ್ಬರಲ್ಲಿ ಯಾರದ್ದು ತಪ್ಪು ಎಂದು ತಿಳಿದು ಬಂದಿಲ್ಲ.
ಪ್ರೀತಿ ಶರ್ಮಾ ಎಂಬ ಯುವತಿ ಚಲಿಸುತ್ತಿದ್ದ ಮೊಪೆಡ್ ಗೆ ಕಾರು ಡಿಕ್ಕಿ ಹೊಡೆದಿದ್ದು, ಜಾಮಾನಗರದ ವಿದ್ಯಾಸಾಗರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಗಾಯಗೊಂಡ ಆಕೆಯನ್ನು ಜಡೇಜಾ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.