• Tag results for ಅಪಘಾತ

ಮಂಗಳೂರು: ಲಾರಿಗೆ ಕಾರು ಢಿಕ್ಕಿ, ಓರ್ವ ಸಾವು, ಐವರಿಗೆ ಗಾಯ

ಮೇ 31 ರ ಭಾನುವಾರ ನಸುಕಿನ ಜಾವ ಇಲ್ಲಿನ ಕಳ್ಳಪು ಸಮೀಪದ ಸೇತುವೆಯಲ್ಲಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿ ಐದು ಮಂದಿ ಗಾಯಗೊಂಡಿದ್ದಾರೆ.

published on : 31st May 2020

ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್’ ಸೀಸನ್ 4ರ ವಿಜೇತೆ ಅಪಘಾತದಲ್ಲಿ ಸಾವು

ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ಖ್ಯಾತ ರಿಯಾಲಿಟಿ ಶೋ ‘ಪ್ಯಾಟೆ  ಹುಡ್ಗೀರ್ ಹಳ್ಳಿ ಲೈಫ್’ ಸೀಸನ್ 4 ವಿಜೇತೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

published on : 27th May 2020

ಕೋಲಾರ: ಭೀಕರ ರಸ್ತೆ ಅಪಘಾತ ಇಬ್ಬರು ಸವಾರರು ಸಾವು

ಬೈಕ್‌ ಮತ್ತು ಸರಕು ಸಾಗಣೆ ವಾಹನದ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಗರದ ಹೊರವಲಯದ ಕೋಡಿಕಣ್ಣೂರು ಕೆರೆ ಏರಿಯಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

published on : 26th May 2020

ಬೆಳಗಾವಿ: ಕಾರು ಹರಿದು ಮಹಿಳೆಯರಿಬ್ಬರ ಸಾವು

ಕಾರು ಹರಿದು ಮಹಿಳೆಯರಿಬ್ಬರು ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಮಾರಿಹಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಮುಥಗಾ ಗ್ರಾಮದ ಬಳಿ ನಡೆದಿದೆ.

published on : 25th May 2020

ಕುಡಿದ ಅಮಲಿನಲ್ಲಿ ತಹಸೀಲ್ದಾರ್ ವಾಹನಕ್ಕೆ ಡಿಕ್ಕಿ; ಪೇದೆಗೆ ಗಂಭೀರ ಗಾಯ

ಕರ್ತವ್ಯದಲ್ಲಿದ್ದ  ಪೊಲೀಸ್ ಕಾನ್ಸ್ ಟೇಬಲ್  ಕುಡಿದ ಅಮಲಿನಲ್ಲಿ ತಹಸೀಲ್ದಾರ್  ಖಾಸಗಿ ಕಾರಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಬಳಿ ಘಟನೆ ನಡೆದಿದೆ.

published on : 24th May 2020

ಭೀಕರ ಅಪಘಾತದಲ್ಲಿ ಬಿಹಾರ ಮೂಲದ 3 ವಲಸೆ ಕಾರ್ಮಿಕರ ಸಾವು, ಓರ್ವ ಗಂಭೀರ

ದೇಶದಲ್ಲಿ ವಲಸೆ ಕಾರ್ಮಿಕರ ಸಾವಿನ ಸರಣಿ ಮುಂದುವರೆದಿದ್ದು, ಇಂದು ಉತ್ತರ ಪ್ರದೇಶದಲ್ಲಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಬಿಹಾರ ಮೂಲದ ಮೂವರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ.

published on : 22nd May 2020

2010 ಮಂಗಳೂರು ಏರ್ ಇಂಡಿಯಾ ಅಪಘಾತ: ಮೃತನ ಕುಟುಂಬಕ್ಕೆ 7.64 ಕೋಟಿ ರು. ಪರಿಹಾರ ನೀಡಿದ ಸುರ್ಪೀಂ ಕೋರ್ಟ್

 ಮೇ  22, 2010 ರಂದು ದುಬೈನಿಂದ ಮಂಗಳೂರಿಗೆ ಬಂದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ 812 ರ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಂಬಂಧಿಕರಿಗೆ ಸುಪ್ರೀಂ ಕೋರ್ಟ್ 7.64 ಕೋಟಿ ರೂ. ಪರಿಹಾರ ನೀಡಿದೆ. ಅಪಘಾತದಲ್ಲಿ ವಿಮಾನದಲ್ಲಿದ್ದ  166 ಪ್ರಯಾಣಿಕರಲ್ಲಿ 158 ಮಂದಿ ಸಾವಿಗೀಡಾಗಿದ್ದರು.

published on : 21st May 2020

ಉತ್ತರ ಪ್ರದೇಶ: ಟ್ರಕ್ ಅಪಘಾತದಲ್ಲಿ 6 ಮಂದಿ ರೈತರು ದುರ್ಮರಣ

ಟ್ರಕ್ ಗಳ ಮಧ್ಯೆ ಢಿಕ್ಕಿಯಾಗಿ 6 ಮಂದಿ ರೈತರು ಸ್ಥಳದಲ್ಲಿಯೇ ಮೃತಪಟ್ಟು ಓರ್ವ ಗಾಯಗೊಂಡಿರುವ ಘಟನೆ ಪಶ್ಚಿಮ ಉತ್ತರ ಪ್ರದೇಶದ ಇಟಾವಾ ನಗರದ ಫ್ರೆಂಡ್ಸ್ ಕಾಲೊನಿಯಲ್ಲಿ ಕಳೆದ ರಾತ್ರಿ ಸಂಭವಿಸಿದೆ.

published on : 20th May 2020

ಮಧ್ಯ ಪ್ರದೇಶದಲ್ಲಿ ಲಾರಿ ಪಲ್ಟಿಯಾಗಿ ಆರು ವಲಸೆ ಕಾರ್ಮಿಕರು ಸಾವು

ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದ ಲಾರಿ ಪಲ್ಟಿಯಾಗಿ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದಂತೆ ಆರು ಕಾರ್ಮಿಕರು ಮೃತಪಟ್ಟಿರುವ ಘಟನೆ ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯ ಬಂಡಾ ಪಟ್ಣಣ ಸಮೀಪ ನಡೆದಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

published on : 16th May 2020

ಉತ್ತರ ಪ್ರದೇಶ: ಇಂತಹ ಅಪಘಾತಗಳು ಸಾವುಗಳಲ್ಲ, ಕೊಲೆಗಳು- ಅಖಿಲೇಶ್ ಯಾದವ್

ಉತ್ತರ ಪ್ರದೇಶದ  ಔರೈಯಾದಲ್ಲಿ ನಡೆದ ಸಂಭವಿಸಿದ ಭೀಕರ ಅಪಘಾತದಲ್ಲಿ 24 ವಲಸೆ ಕಾರ್ಮಿಕರು ಮೃತಪಟ್ಟಿರುವ ಬಗ್ಗೆ ತೀವ್ರ ದು:ಖ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಇಂತಹ ಅಪಘಾತಗಳು ಸಾವುಗಳಲ್ಲ, ಕೊಲೆ ಎಂದಿದ್ದಾರೆ.

published on : 16th May 2020

ಉತ್ತರ ಪ್ರದೇಶ ಟ್ರಕ್ ಅಪಘಾತ: ಸಾವಿನ ಸಂಖ್ಯೆ 24ಕ್ಕೆ ಏರಿಕೆ, ಪ್ರಧಾನಿ ಮೋದಿ ಸಂತಾಪ

ಉತ್ತರ ಪ್ರದೇಶ ಸಂಭವಿಸಿದ ವಲಸೆ ಕಾರ್ಮಿಕರ ಹೊತ್ತಿದ್ದ ಟ್ರಕ್ ಗಳ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.

published on : 16th May 2020

ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕರು ಅಪಘಾತದಲ್ಲಿ ಸಾವು: ಸರ್ಕಾರದಿಂದ ತಲಾ 2 ಲಕ್ಷ ರೂ. ಪರಿಹಾರ

ಮಧ್ಯ ಪ್ರದೇಶದ ಗುನಾ ಎಂಬಲ್ಲಿ ಕಳೆದ ರಾತ್ರಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಕುಟುಂಬಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಂಭೀರ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಪ್ರಕಟಿಸಿದ್ದಾರೆ.

published on : 14th May 2020

ಎರಡು ಪ್ರತ್ಯೇಕ ರಸ್ತೆ ಅಪಘಾತ: 14 ಮಂದಿ ವಲಸೆ ಕಾರ್ಮಿಕರು ಸಾವು

ವಲಸೆ ಕಾರ್ಮಿಕರು ಮಾರ್ಗ ಮಧ್ಯೆ ತಮ್ಮೂರಿಗೆ ಹೋಗುತ್ತಿರುವಾಗ ಸಾಯುವ ಪ್ರಕರಣ ಮುಂದುವರಿದಿದೆ. ಕಳೆದ ತಡರಾತ್ರಿ ಮುಜಾಫರ್ ನಗರ-ಶಹರಾನ್ ಪುರ ಹೆದ್ದಾರಿಯಲ್ಲಿ 6 ಮಂದಿ ವಲಸೆ ಕಾರ್ಮಿಕರು ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬರುತ್ತಿದ್ದ ಬಸ್ ಹರಿದು ಮೃತಪಟ್ಟಿದ್ದಾರೆ.

published on : 14th May 2020

ಕಾರು, ಬೈಕ್​ ಮುಖಾಮುಖಿ ಡಿಕ್ಕಿ: ತಾಯಿ-ಮಗನ ಸ್ಥಿತಿ ಗಂಭೀರ

ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್​ನಲ್ಲಿ ತೆರಳುತ್ತಿದ್ದ ತಾಯಿ ಹಾಗೂ ಮಗನ ಸ್ಥಿತಿ ಗಂಭೀರವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಉಡಿಗಾಲ ಸಮೀಪ ನಡೆದಿದೆ.

published on : 11th May 2020

ಮಧ್ಯಪ್ರದೇಶ: ಮಗುಚಿ ಬಿದ್ದ ಟ್ರಕ್; 5 ವಲಸೆ ಕಾರ್ಮಿಕರು ಸಾವು, 15 ಜನರಿಗೆ ಗಾಯ

ಮಧ್ಯಪ್ರದೇಶದಲ್ಲಿ ಮಾವಿನಹಣ್ಣುಗಳನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ವೊಂದು ಮಗುಚಿಬಿದ್ದ ಪರಿಣಾಮ 5 ಮಂದಿ ವಲಸೆ ಕಾರ್ಮಿಕರು ಧಾರುಣ ಸಾವನ್ನಪ್ಪಿದ್ದು, 15 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ. 

published on : 10th May 2020
1 2 3 4 5 6 >