Chittoor-Bengaluru Highway: ಅಡ್ಡ ಬಂದ ಬೈಕರ್: ಅಪಘಾತ ತಪ್ಪಿಸಲು ಹೋದ ಕಂಟೇನರ್ ಕಾರಿನ ಮೇಲೆ ಬಿದ್ದು ಟೆಕ್ಕಿ ಸಾವು! Video

ಆಂಧ್ರ ಪ್ರದೇಶದ ಚಿತ್ತೂರು-ಬೆಂಗಳೂರಿನಲ್ಲಿ ಹೈವೇಯಲ್ಲಿ ಈ ದುರಂತ ಸಂಭವಿಸಿದ್ದು, ಕಾರಿನ ಮೇಲೆ ಕಂಟೇನರ್ ಲಾರಿ ಮಗುಚಿ ಬಿದ್ದ ಪರಿಣಾಮ ಕಾರು ಅಪ್ಪಚ್ಚಿಯಾಗಿ ಕಾರಿನೊಳಗಿದ್ದ ಟೆಕ್ಕಿ ಸಾವನ್ನಪ್ಪಿದ್ದಾರೆ.
Bengaluru Techie Crushed to Death by Overturning Container Lorry
ಚಿತ್ತೂರು ಬೆಂಗಳೂರು ಹೈವೇನಲ್ಲಿ ಅಪಘಾತ
Updated on

ಚಿತ್ತೂರು: ಸರಕು ಸಾಗಾಣಿಕಾ ಕಂಟೇನರ್ ಲಾರಿಯೊಂದು ಅಪಘಾತ ತಪ್ಪಿಸಲು ಹೋಗಿ ಕಾರಿನ ಮೇಲೆ ಬಿದ್ದಿದ್ದು, ಕಾರಿನಲ್ಲಿದ್ದ ಬೆಂಗಳೂರು ಮೂಲದ ಟೆಕ್ಕಿ ಭೀಕರ ಸಾವನ್ನಪ್ಪಿದ್ದಾರೆ.

ಆಂಧ್ರ ಪ್ರದೇಶದ ಚಿತ್ತೂರು-ಬೆಂಗಳೂರಿನಲ್ಲಿ ಹೈವೇಯಲ್ಲಿ ಈ ದುರಂತ ಸಂಭವಿಸಿದ್ದು, ಕಾರಿನ ಮೇಲೆ ಕಂಟೇನರ್ ಲಾರಿ ಮಗುಚಿ ಬಿದ್ದ ಪರಿಣಾಮ ಕಾರು ಅಪ್ಪಚ್ಚಿಯಾಗಿ ಕಾರಿನೊಳಗಿದ್ದ ಟೆಕ್ಕಿ ಸಾವನ್ನಪ್ಪಿದ್ದಾರೆ. ಮೃತ ಟೆಕ್ಕಿಯನ್ನು 28 ವರ್ಷದ ವಿಪ್ರೋ ಸಿಬ್ಬಂದಿ ಅನುದೀಪಕ್ ಎಂದು ಗುರುತಿಸಲಾಗಿದೆ.

ಚಿತ್ತೂರಿನ ಗುಡಿಪಾಲ ಮಂಡಲದ ರಾಮಪುರಂ ಗ್ರಾಮದ ನಿವಾಸಿ ಡಿ ಅನುದೀಪಕ್ ಅವರು ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಂದು ಮಾರ್ಗದಲ್ಲಿ ಬರುತ್ತಿದ್ದ ಕಂಟೇನರ್ ಲಾರಿಗೆ ಸರ್ಕಲ್ ನಲ್ಲಿ ಬೈಕ್​ ಅಡ್ಡಬಂದಿದೆ.

ಈ ವೇಳೆ ಲಾರಿ ಚಾಲಕ ಬೈಕ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬಲಕ್ಕೆ ತಿರುಗಿಸಿದ್ದಾನೆ. ಈ ವೇಳೆ ಲಾರಿ ನಿಯಂತ್ರಣ ತಪ್ಪಿ ಮಗುಚಿದೆ. ಇದೇ ಸಂದರ್ಭದಲ್ಲಿ ಅಲ್ಲಿ ಬರುತ್ತಿದ್ದ ಕಾರಿನ ಮೇಲೆ ಮಗುಚಿದೆ. ಈ ವೇಳೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಟೆಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Bengaluru Techie Crushed to Death by Overturning Container Lorry
ಭೀಕರ ಅಪಘಾತ: ಡಿವೈಡರ್ ಗೆ ಕ್ರೂಸರ್ ಢಿಕ್ಕಿ, ಶ್ರೀಶೈಲಂ ಯಾತ್ರೆಗೆ ತೆರಳಿದ್ದ ಕರ್ನಾಟಕದ ಮೂವರು ಸಾವು

ಬೆಂಗಳೂರಿನಲ್ಲಿ ಕೆಲಸ

ಮೃತ ಅನುದೀಪ್ ಬೆಂಗಳೂರಿನಲ್ಲಿ ವಿಪ್ರೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ಕೆಲಸದ ಸ್ಥಳಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದುರ್ಘಟನೆಯ ವಿಡಿಯೋ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com