ಜಾಲಿರೈಡ್ ಗೆಂದು ಹೋದವರು ಜವರಾಯನ ಪಾದ ಸೇರಿದರು; ಹೊಸಕೋಟೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಪೋಷಕರ ಆಕ್ರಂದನ; Video

ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ 6 ಮಂದಿ ಹಾಗೂ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತದ ಮಾಹಿತಿ ತಿಳಿದ ಕೂಡಲೇ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
SUV car and Canter after accident
ಅಪಘಾತಕ್ಕೆನಜ್ಜುಗುಜ್ಜಾದ ಕಾರು ಮತ್ತು ಮಗುಚಿಬಿದ್ದ ಕ್ಯಾಂಟರ್
Updated on

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ಇಂದು ಶುಕ್ರವಾರ ನಡೆದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕ್ಯಾಂಟರ್, ಬೈಕ್ ಮತ್ತು ಎಕ್ಸ್‌ಯುವಿ ಕಾರಿನ ನಡುವೆ ನಡೆದ ಈ ದುರಂತದಲ್ಲಿ ಮೃತಪಟ್ಟವರಲ್ಲಿ ಆರು ವಿದ್ಯಾರ್ಥಿಗಳು ಮತ್ತು ಓರ್ವ ಬೈಕ್ ಸವಾರ ಸೇರಿದ್ದಾರೆ.

ಕಾರಿನಲ್ಲಿದ್ದ 6 ಮಂದಿ ವಿದ್ಯಾರ್ಥಿಗಳು, ಓರ್ವ ಬೈಕ್ ಸವಾರ

ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ 6 ಮಂದಿ ಹಾಗೂ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತದ ಮಾಹಿತಿ ತಿಳಿದ ಕೂಡಲೇ ಸ್ಥಳೀಯರು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಆದರೆ, ಕಾರಿನಲ್ಲಿದ್ದವರು ಮತ್ತು ಬೈಕ್ ಸವಾರರು ಗಂಭೀರ ಗಾಯಗಳಿಂದಾಗಿ ಸ್ಥಳದಲ್ಲೇ ಪ್ರಾಣಪಕ್ಷಿ ಹಾರಿ ಹೋಗಿತ್ತು. ದುರಂತವೆಂದರೆ ಆರು ಮಂದಿ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಂಡು ಕುಟುಂಬಕ್ಕೆ ಆಧಾರಸ್ತಂಭವಾಗಬೇಕಿದ್ದವರು ಜವರಾಯನ ಪಾದ ಸೇರಿದ್ದಾರೆ. ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಮೃತಪಟ್ಟ ವಿದ್ಯಾರ್ಥಿಗಳು ಮತ್ತು ಬೈಕ್ ಸವಾರನ ವಿವರ ಹೀಗಿದೆ:

  • ಅಶ್ವಿನ್ ನಾಯರ್ (17) – ಆರ್‌ವಿ ಪಿಯು ಕಾಲೇಜ್ ವಿದ್ಯಾರ್ಥಿ, ಕೊತ್ತನೂರು ನಿವಾಸಿ

  • ಅರ್ಹನ್ ಶರೀಫ್ – ಸಿಎಂಆರ್ ಶಾಲೆ ವಿದ್ಯಾರ್ಥಿ, ಹೆಚ್‌ವಿಆರ್ ಲೇಔಟ್ ನಿವಾಸಿ

  • ಅಯನ್ ಅಲಿ (17) – ಸಿಎಂಆರ್ ಶಾಲೆ ವಿದ್ಯಾರ್ಥಿ

  • ಭರತ್ (18) – ಸಿಎಂಆರ್ ಕಾಲೇಜ್ ವಿದ್ಯಾರ್ಥಿ, ಫ್ರೇಜರ್ ಟೌನ್ ನಿವಾಸಿ

  • ಈತನ್ ಜಾರ್ಜ್ (17) – ಆರ್‌ವಿ ಪ್ರಥಮ ಪಿಯು ಕಾಲೇಜ್ ವಿದ್ಯಾರ್ಥಿ, ಹುಳಿಮಾವು ನಿವಾಸಿ

  • ಫರ್ಹಾನ್ (17) - ಮೃತಪಟ್ಟ ಮತ್ತೊಬ್ಬ ಯುವಕ

  • ಗಗನ್ (26) - ಮೃತ ಬೈಕ್ ಸವಾರ, ಸಫಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು

SUV car and Canter after accident
ಹೊಸಕೋಟೆ ಬಳಿ ಭೀಕರ ಸರಣಿ ಅಪಘಾತ: ಸ್ಥಳದಲ್ಲೇ 7 ಮಂದಿ ಸಾವು; Video

ಜಾಲಿರೈಡ್ ಗೆಂದು ಹೋದವರು ಜವರಾಯನ ಪಾದ ಸೇರಿದರು

ಆರು ಮಂದಿ ವಿದ್ಯಾರ್ಥಿಗಳು ಕಾರಿನಲ್ಲಿ ಹೊಸಕೋಟೆ-ದಾಬಸ್​​ಪೇಟೆ ನೂತನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಜಾಲಿರೈಡ್ ಮಾಡೋಣವೆಂದು ಸ್ನೇಹಿತರೆಲ್ಲಾ ಸೇರಿ ಕಾರಿನಲ್ಲಿ ಹೋಗುತ್ತಿದ್ದರು. ಅತಿಯಾದ ವೇಗದ ಚಾಲನೆಯಿಂದಲೇ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಿಂದ ಹೇಳುತ್ತಾರೆ.ಅಪಘಾತಕ್ಕೀಡಾದ ಎಕ್ಸ್‌ಯುವಿ ಕಾರು ಅಯನ್ ಅಲಿ ಎಂಬ ಯುವಕನಿಗೆ ಸೇರಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಮಕ್ಕಳನ್ನು ಕಳೆದುಕೊಂಡ ಪೋಷಕರ ಕಣ್ಣೀರು

ಅಪಘಾತ ನಡೆದ ಸ್ಥಳಕ್ಕೆ ತಕ್ಷಣವೇ ದೌಡಾಯಿಸಿದ ಬೆಂಗಳೂರು ಗ್ರಾಮಾಂತರ ಎಸ್‌ಪಿ ಚಂದ್ರಕಾಂತ್ ಹಾಗೂ ಪೊಲೀಸರ ತಂಡ, ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಪೋಷಕರಿಗೆ ಬೆಳ್ಳಂಬೆಳಗ್ಗೆ ಈ ಸಾವಿನ ಸುದ್ದಿ ತಲುಪಿದ್ದು, ಮಕ್ಕಳನ್ನು ಕಳೆದುಕೊಂಡ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಇತ್ತ ಏನೂ ತಪ್ಪು ಮಾಡದೆ ತನ್ನ ಪಾಡಿಗೆ ತಾನು ಕೆಲಸಕ್ಕೆ ಹೊರಟಿದ್ದ ಉದ್ಯೋಗಿ ಗಗನ್ ಕೂಡ ತನ್ನ ಜೀವವನ್ನೇ ಕಳೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com