ಸೆಹ್ವಾಗ್ ರನ್ನು ಕೋಚ್ ಸ್ಥಾನಕ್ಕೆ ನೇಮಕ ಮಾಡಲು ಬಿಸಿಸಿಐ ಹಿಂದೇಟು ಹಾಕುತ್ತಿರುವುದಕ್ಕೆ ಕಾರಣ ಗೊತ್ತೆ?

ರವಿ ಶಾಸ್ತ್ರಿಗಿಂತಲೂ ಮುಂಚೂಣಿಯಲ್ಲಿದ್ದ ವಿರೇಂದ್ರ ಸೆಹ್ವಾಗ್ ಅವರನ್ನು ಕೋಚ್ ಸ್ಥಾನಕ್ಕೆ ನೇಮಕ ಮಾಡಲು ಬಿಸಿಸಿಐ ಹಿಂದೇಟು ಹಾಕುತ್ತಿರುವುದಕ್ಕೆ...
ಸೆಹ್ವಾಗ್
ಸೆಹ್ವಾಗ್
ನವದೆಹಲಿ: ರವಿ ಶಾಸ್ತ್ರಿ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸುವುದು ಖಾತ್ರಿಯಾಗುವವರೆಗೂ ಆ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರ ಹೆಸರು ಮುಂಚೂಣಿಯಲ್ಲಿತ್ತು. 
ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ವಿರೇಂದ್ರ ಸೆಹ್ವಾಗ್, ಕಿಂಗ್ಸ್ XI ಪಂಜಾಬ್ ತಂಡಕ್ಕೆ ಮಾರ್ಗದರ್ಶಕ, ಕೋಚ್ ಹಾಗೂ ಈ ಎಲ್ಲಾ ಆಟಗಾರರೊಂದಿಗೆ ಕ್ರಿಕೆಟ್ ಪಂದ್ಯಗಳಲ್ಲಿ ಆಡಿದ್ದೇನೆ ಎಂದಷ್ಟೇ ಹೇಳಿದ್ದರು. ಈ ಬಳಿಕ ಮತ್ತಷ್ಟು ವಿಸ್ತಾರವಾದ ಅರ್ಜಿಯನ್ನು ಸಲ್ಲಿಸುವಂತೆ ಬಿಸಿಸಿಐ ಸೆಹ್ವಾಗ್ ಗೆ ತಿಳಿಸಿತ್ತು ಎನ್ನಲಾಗಿದೆ.
ರವಿ ಶಾಸ್ತ್ರಿಗಿಂತಲೂ ಮುಂಚೂಣಿಯಲ್ಲಿದ್ದ ವಿರೇಂದ್ರ ಸೆಹ್ವಾಗ್ ಅವರನ್ನು ಕೋಚ್ ಸ್ಥಾನಕ್ಕೆ ನೇಮಕ ಮಾಡಲು ಬಿಸಿಸಿಐ ಹಿಂದೇಟು ಹಾಕುತ್ತಿರುವುದಕ್ಕೆ ವಿರೇಂದ್ರ ಸೆಹ್ವಾಗ್ ನೇರ ನುಡಿಯ ವ್ಯಕ್ತಿತ್ವ ಹೊಂದಿರುವವರಾಗಿರುವುದು ಮತ್ತೊಂದು ಕಾರಣವಾಗಿದೆ. 
ಡೆಕನ್ ಕ್ರಾನಿಕಲ್ ವರದಿಯ ಪ್ರಕಾರ, ವಿರೇಂದ್ರ ಸೆಹ್ವಾಗ್ ಅವರು ಟ್ವಿಟರ್ ನಲ್ಲಿ ನೇರಾನೇರವಾಗಿ ಮಾತನಾಡುತ್ತಾರೆ, ಆದ್ದರಿಂದ ಅವರನ್ನು ಕೋಚ್ ಆಗಿ ನೇಮಕ ಮಾಡುವುದಕ್ಕೆ ಬಿಸಿಸಿಐ ಹಿಂದೇಟು ಹಾಕುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಈ ಬಗ್ಗೆ ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿರುವ ಕ್ರಾನಿಕಲ್ ವರದಿ, ಒಂದು ವೇಳೆ ಸೆಹ್ವಾಗ್ ಅವರನ್ನು ಕೋಚ್ ಆಗಿ ನೇಮಿಸಿದರೆ ಟ್ವಿಟರ್ ನಲ್ಲಿ ನೇರಾ ನೇರವಾಗಿ ಮಾತನಾಡದಂತೆ ಷರತ್ತು ವಿಧಿಸಬಹುದು, ಆದರೆ ಒಂದು ವೇಳೆ ಭಾರತ ಪಂದ್ಯವನ್ನೋ, ಸರಣಿಯನ್ನೋ ಸೋತರೆ ಸೆಹ್ವಾಗ್ ಅವರು "ಸೋ ವಾಟ್ (so what) ಎಂದು ಪ್ರಶ್ನಿಸಿದರೆ ಮುಜುಗರ ಎದುರಿಸಬೇಕಾಗುತ್ತದೆ ಎಂಬುದು ಬಿಸಿಸಿಐ ನ ಆತಂಕವಾಗಿದೆ ಎಂದು ಹೇಳಿದೆ. 
ವಿರೇಂದ್ರ ಸೆಹ್ವಾಗ್ ಹೊರತಾಗಿ ಈಗ ರವಿಶಾಸ್ತ್ರಿ, ಆಸ್ಟ್ರೇಲಿಯಾದ ಬೌಲರ್ ಟಾಮ್ ಮೂಡಿ, ಇಂಗ್ಲೆಂಡ್​ನ ರಿಚರ್ಡ್ ಪೈಬಸ್, ಭಾರತ ತಂಡದ ಮಾಜಿ ಆಟಗಾರರಾದ ಲಾಲ್​ಚಂದ್ ರಜಪೂತ್ ಹಾಗೂ ಕರ್ನಾಟಕದ ದೊಡ್ಡ ಗಣೇಶ್ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com