ರಾಜಸ್ತಾನ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಸಿಪಿ ಜೋಶಿ ಆಯ್ಕೆ

ಕಾಂಗ್ರೆಸ್ ಮುಖಂಡ ಸಿಪಿ ಜೋಶಿ ರಾಜಸ್ತಾನ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ...
ಸಿಪಿ ಜೋಶಿ
ಸಿಪಿ ಜೋಶಿ
ಜೈಪುರ:  ಕಾಂಗ್ರೆಸ್ ಮುಖಂಡ ಸಿಪಿ ಜೋಶಿ ರಾಜಸ್ತಾನ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಐಪಿಎಲ್ ಹಗರಣದ ಆರೋಪಿ ಹಾಗೂ ರಾಜಸ್ತಾನ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಲಲಿತ್ ಮೋದಿ ಪುತ್ರ ರುಚಿರ್ ಕುಮಾರ್ ಕೂಡ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಸಿಪಿ ಜೋಶಿ ಅವರು 19 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು ರುಚಿರ್ ಕುಮಾರ್ 14 ಮತಗಳನ್ನು ಪಡೆದಿದ್ದಾರೆ. 
ಇನ್ನು ಸಂಸ್ಥೆಯ ಕಾರ್ಯದರ್ಶಿಯಾಗಿ ರಾಜೇಂದ್ರ ನಂದು ಮತ್ತು ಖಜಾಂಚಿಯಾಗಿ ಪಿಂಕೇಶ್ ಜೈನ್ ಆಯ್ಕೆಯಾಗಿದ್ದಾರೆ. 
ಮೇ 26ಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿತ್ತು. ಆದರೆ ಪ್ರಕ್ರಿಯೆಯಲ್ಲಿ ಲೋಪ ದೋಷಗಳು ಇದ್ದುದ್ದರಿಂದ ಮೇ 29ರಂದು ಚುನಾವಣೆ ನಡೆಸಿ ಎಂದು ರಾಜಸ್ತಾನ ಹೈಕೋರ್ಟ್ ಆದೇಶಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com