ಗುಜರಾತ್: ಕ್ರಿಕೆಟ್​ಪಂದ್ಯಾವಳಿಯಲ್ಲಿ ಗೆದ್ದವರಿಗೆ ಟ್ರೋಫಿ ಬದಲು ಹಸು ಬಹುಮಾನ!

ಗುಜರಾತ್​ನ ವಡೋದರಾದಲ್ಲಿ ಆಯೋಜಿಸಲಾಗಿದ್ದ ಸ್ಥಳೀಯ ಕ್ರಿಕೆಟ್​ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ನಗದು ಬಹುಮಾನ....
ಹಸುವಿನೊಂದಿಗೆ ವಿಜೇತ ತಂಡ
ಹಸುವಿನೊಂದಿಗೆ ವಿಜೇತ ತಂಡ
ವಡೋದರಾ: ಗುಜರಾತ್​ನ ವಡೋದರಾದಲ್ಲಿ ಆಯೋಜಿಸಲಾಗಿದ್ದ ಸ್ಥಳೀಯ ಕ್ರಿಕೆಟ್​ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ನಗದು ಬಹುಮಾನ ಮತ್ತು ಟ್ರೋಫಿ ನೀಡುವ ಬದಲು ಹಸುಗಳನ್ನು ಬಹುಮಾನವಾಗಿ ನೀಡಿದ ಅಪರೂಪದ ಘಟನೆ ಭಾನುವಾರ ನಡೆದಿದೆ.
ಗೋ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕ್ರಿಕೆಟ್​ ಟೂರ್ನಿಯನ್ನು ಆಯೋಜಿಸಿದ್ದ ರಾಬ್ರಿ ಸಮುದಾಯದ ಮುಖಂಡರು ಗೆದ್ದವರಿಗೆ ಹಸುಗಳನ್ನು ಬಹುಮಾನವಾಗಿ ನೀಡಿದ್ದಾರೆ.
ಗೋವುಗಳು ನಮ್ಮ ಸಮಾಜದ ಬಹುಮುಖ್ಯಭಾಗ, ಅವುಗಳನ್ನು ರಕ್ಷಿಸಬೇಕಾದುದು ನಮ್ಮ ಕರ್ತವ್ಯ ಎಂಬ ಸಂದೇಶವನ್ನು ಜನರಿಗೆ ತಲುಪಿಸುವುದು ಈ ಟೂರ್ನಿಯ ಉದ್ದೇಶವಾಗಿತ್ತು. ಗೋವುಗಳಿಗೆ ರಾಷ್ಟ್ರೀಯ ಪ್ರಾಣಿ ಎಂಬ ಮಾನ್ಯತೆ ಸಿಗಬೇಕು. ರಾಷ್ಟ್ರೀಯ ಪ್ರಾಣಿ ಎಂದು ಗೋವುಗಳನ್ನು ಘೋಷಿಸಿದಾಗ ಮಾತ್ರ ಅವುಗಳ ರಕ್ಷಣೆ ಸಾಧ್ಯ ಎಂದು ಟೂರ್ನಿಯ ಆಯೋಜಕರು ಹೇಳಿದ್ದಾರೆ.
ಕ್ರಿಕೆಟ್​ ಟೂರ್ನಿಯಲ್ಲಿ ಮ್ಯಾನ್​ ಆಫ್​ ದಿ ಮ್ಯಾಚ್​ ಬಹುಮಾನ ಪಡೆದವರಿಗೆ ಹಸು ಮತ್ತು ತಂಡದ ಉಳಿದ ಸದಸ್ಯರಿಗೆ ಗಿರ್​ ತಳಿಯ ಕರುಗಳನ್ನು ಬಹುಮಾನವಾಗಿ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com