ಪೆಪ್ಸಿ ಒಪ್ಪಂದ ನವೀಕರಣಕ್ಕೆ ಕೊಹ್ಲಿ ನಕಾರ

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಾವು ಸೇವಿಸುವ ಅಥವಾ ಬಳಸುವ ಉತ್ಪನ್ನಗಳನ್ನು ಮಾತ್ರ ಪ್ರಚಾರ ಮಾಡುವ ನಿರ್ಧಾರ ತೆಗೆದುಕೊಂಡಿದ್ದು ಸಾಫ್ಟ್...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಾವು ಸೇವಿಸುವ ಅಥವಾ ಬಳಸುವ ಉತ್ಪನ್ನಗಳನ್ನು ಮಾತ್ರ ಪ್ರಚಾರ ಮಾಡುವ ನಿರ್ಧಾರ ತೆಗೆದುಕೊಂಡಿದ್ದು ಸಾಫ್ಟ್ ಡ್ರಿಂಕ್ಸ್ ಪೆಪ್ಸಿ ಜತೆಗಿನ 6 ವರ್ಷಗಳ ಒಪ್ಪಂದವನ್ನು ನವೀಕರಿಸಲು ನಿರಾಕರಿಸಿದ್ದಾರೆ. 
ಪೆಪ್ಸಿ ಕೊಹ್ಲಿಯನ್ನು ಪ್ರಚಾರ ರಾಯಭಾರಿಯಾಗಿ ಮುಂದುವರಿಸಲು ಆಸಕ್ತಿ ತೋರಿತ್ತು. ಆದರೆ ಕೊಹ್ಲಿ ನಾನು ಪೆಪ್ಸಿ ಕುಡಿಯಲ್ಲ, ಬೇರೆಯವರಿಗೆ ಕುಡಿಯಲು ಹೇಳಲಾರೆ ಎಂದು ಸ್ಪಷ್ಟವಾಗಿ ಆಫರ್ ತಿರಸ್ಕರಿಸುವ ಮೂಲಕ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದಾರೆ. 
ಫಿಟ್ನೆಸ್ ಕಾರಣಗಳಿಂದಾಗಿ ಕೊಹ್ಲಿ ಪೆಪ್ಸಿಯಂಥ ಯಾವುದೇ ಸಾಫ್ಟ್ ಡ್ರೀಂಕ್ಸ್ ಗಳನ್ನು ಕುಡಿಯುವುದಿಲ್ಲ. ಹೀಗಾಗಿ ಹಣ ಸಿಗುತ್ತದೆಂಬ ಕಾರಣಕ್ಕಾಗಿ ನಾನು ಬೇರೆಯವರಿಗೆ ಇದನ್ನು ಕುಡಿಯಿರಿ ಎಂದು ಪ್ರೇರೇಪಿಸಲಾರೆ ಎಂದು ಕೊಹ್ಲಿ ಹೇಳಿದ್ದಾರೆ. 
ವಿರಾಟ್ ಕೊಹ್ಲಿ ಅವರ ಬ್ರ್ಯಾಂಡ್ ಮೊತ್ತ 120 ದಶಳಕ್ಷ ಡಾಲರ್(773 ಕೋಟಿ ರು.) ಹೆಚ್ಚಿದೆ ಎಂದು ಸ್ವತಃ ವಿರಾಟ್ ಕೊಹ್ಲಿಯೇ ಸಂದರ್ಶನವೊಂದರಲ್ಲಿ ಹೇಳಿದ್ದರು. ಸದ್ಯ ಕೊಹ್ಲಿ 18 ಬ್ರ್ಯಾಂಡ್ ಗಳ ಪ್ರಚಾರ ರಾಯಭಾರಿಯಾಗಿದ್ದಾರೆ. ಇದರಲ್ಲಿ ಆಹಾರೋತ್ಪನ್ನ, ಪಾನೀಯ, ಆಡಿ ಕಾರ್, ಕೋಲ್ಗೆಟ್, ಪುಮಾ ಕ್ರೀಡಾ ಉಡುಪು, ಎಂಆರ್ಎಫ್ ಟೈರ್, ಟಿಸಾಟ್ ವಾಜ್, ಲಗೇಜ್ ಬ್ಯಾಗ್ ಮುಂತಾದವು ಸೇರಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com