ಐಸಿಸಿ ಒಡಿಐ ರ್ಯಾಂಕಿಂಗ್ ಪ್ರಕಟ: ವಿರಾಟ್ ಕೊಹ್ಲಿ ನಂ.1 ಬ್ಯಾಟ್ಸ್ ಮೆನ್

ವಿಶ್ವ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪಾರುಪತ್ಯ ಮುಂದುವರೆದಿದ್ದು, ಮಂಗಳವಾರ ಐಸಿಸಿ ಪ್ರಕಟಿಸಿದ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on
ಲಂಡನ್: ವಿಶ್ವ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪಾರುಪತ್ಯ ಮುಂದುವರೆದಿದ್ದು, ಮಂಗಳವಾರ ಐಸಿಸಿ ಪ್ರಕಟಿಸಿದ ಏಕದಿನ ರ್ಯಾಂಕಿಂಗ್ ನಲ್ಲಿ ಕೋಹ್ಲಿ ನಂಬರ್ 1 ಬ್ಯಾಟ್ಸ್ ಮೆನ್ ಸ್ಥಾನ ಪಡೆದಿದ್ದಾರೆ.
ಪ್ರಸ್ತುತ ಲಂಡನ್ ನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ಅವರು 22 ಪಾಯಿಂಟ್ಸ್ ಗಳನ್ನು ಗಳಿಸುವ ಮೂಲಕ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಈ ಮೂಲಕ ಕಳೆದ ಫೆಬ್ರವರಿಯಿಂದ ನಂ.1 ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮೆನ್ ಎಬಿ ಡೆವಿಲಿಯರ್ಸ್‌ ಅವರನ್ನು ಹಿಂದಿಕ್ಕಿದ್ದಾರೆ.
ವಿರಾಟ್ ಕೊಹ್ಲಿ ಒಟ್ಟು 862 ಪಾಯಿಂಟ್ ಪಡೆದು ಮೊದಲ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್‌ ವಾರ್ನರ್‌ 861 ರೇಟಿಂಗ್ ಪಾಯಿಂಟ್‌, ಎಬಿ ಡಿವಿಲಿಯರ್ಸ್‌ 847 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಂತರದ ಸ್ಥಾನ ಹೊಂದಿದ್ದಾರೆ.

ಆಗ್ರ 10 ಸ್ಥಾನಗಳ ಪೈಕಿ ಟೀಂ ಇಂಡಿಯಾದ ಮತ್ತೊಬ್ಬ ಆಟಗಾರ ಶಿಖರ್‌ ಧವನ್‌ 10ನೇ ಸ್ಥಾನ ಹೊಂದಿದ್ದಾರೆ.
2008ರಲ್ಲಿ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರಾದರೂ, ಬಳಿಕ ತಮ್ಮ ಅದ್ಬುತ ಫಾರ್ಮ್ ನಿಂದಾಗಿ ಟೀಂ ಇಂಡಿಯಾದಲ್ಲಿ ಸುಧೀರ್ಘವಾಗಿ ಸ್ಥಾನ ಕಾಯ್ದುಕೊಂಡಿದ್ದರು.  ಇದೀಗ ಅದೇ ಅದ್ಭುತ ಪ್ರದರ್ಶನದಿಂದಾಗಿ ಕೊಹ್ಲಿ ಟೀಂ ಇಂಡಿಯಾ ನಾಯಕ ಸ್ಥಾನಕ್ಕೇರಿದ್ದು, ಏಕದಿನದಲ್ಲಿ ಕೊಹ್ಲಿ ಅವರ ಬ್ಯಾಟಿಂಗ್ ಸರಾಸರಿ ಬರೊಬ್ಬರಿ 92.37ರಷ್ಟಿದೆ. ಕಳೆದ ವರ್ಷ ಕೊಹ್ಲಿ 85.50 ಬ್ಯಾಟಿಂಗ್ ಸರಾಸರಿ  ಹೊಂದಿದ್ದರು.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲೂ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು, ಟೂರ್ನಿಯಲ್ಲಿ ಒಟ್ಟು 157 ರನ್ ಗಳನ್ನು ಪೇರಿಸಿದ್ದಾರೆ. ಇದರಲ್ಲಿ ಎರಡು  ಅರ್ಧಶತಕಗಳು ಕೂಡ ಸೇರಿವೆ. ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ 7ನೇ ಆಟಗಾರನಾಗಿದ್ದು, 271 ರನ್ ಗಳಿಸಿರುವ ಶಿಖರ್ ಧವನ್ ಅಗ್ರ ಸ್ಥಾನದಲ್ಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com