ನವದೆಹಲಿ: ಟೀಂ ಇಂಡಿಯಾದ ಹಿರಿಯ ಕ್ರಿಕೆಟಿಗ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಎರಡನೇ ಹೆಣ್ಣುಮಗುವಿಗೆ ತಂದೆಯಾಗಿದ್ದಾರೆ.
ಗೌತಮ್ ಗಂಭೀರ್ ಮಡದಿ ನತಾಶಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಈ ಶುಭ ಸುದ್ದಿಯನ್ನು ಗೌತಮ್ ಗಂಭೀರ್ ಟ್ವೀಟರ್ ನಲ್ಲಿ ತನ್ನ ಮೊದಲ ಹೆಣ್ಣು ಮಗುವಿನ ತೊಡೆಯ ಮೇಲೆ ಅಸುಕೂಸು ಮಲಗಿರುವ ಫೋಟೋ ಅನ್ನು ಹಾಕಿದ್ದಾರೆ.
ನನ್ನ ಕುಟುಂಬಕ್ಕೆ ಏಂಜಲ್ ನ ಆಗಮನವಾಗಿದೆ. ನಮ್ಮ ಜೀವನದಲ್ಲಿ ಈ ಏಂಜಲ್ ಬೆಳಕನ್ನು ತರುತ್ತಾಳೆ. ಜಗತ್ತಿಗೆ ನಿನ್ನ ಆಗಮನಕ್ಕೆ ಸ್ವಾಗತ, ಪುಟ್ಟ ಏಂಜಲ್ ಎಂದು ಫೋಟೋ ಕೆಳಗೆ ಬರೆದಿದ್ದಾರೆ.
2011ರ ಅಕ್ಟೋಬರ್ ನಲ್ಲಿ ಗೌತಮ್ ಗಂಭೀರ್ ನತಾಶಾಳ ಕೈಹಿಡಿದಿದ್ದರು.
An angel blessing our family, An angel brightening our lives, Welcome to the world, little angel! ❤ pic.twitter.com/nrJ0hhuX9Y