ನೋ ಬಾಲ್ ಜಾಹಿರಾತು: ಬುಮ್ರಾ ಕ್ಷಮೆಯಾಚಿಸಿದ ಜೈಪುರ ಸಂಚಾರಿ ಪೊಲೀಸ್!

ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಜಸ್ ಪ್ರೀತ್ ಬುಮ್ರಾ ನೋಬಾಲ್ ಎಸೆಯುತ್ತಿರುವ ಫೋಟೋ ಹಾಕಿದ್ದ ಜೈಪುರ ಟ್ರಾಫಿಕ್ ಪೊಲೀಸರು ಇದೀಗ ಹೋರ್ಡಿಂಗ್ಸ್...
ಜಸ್ ಪ್ರೀತ್ ಬುಮ್ರಾ
ಜಸ್ ಪ್ರೀತ್ ಬುಮ್ರಾ
Updated on
ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಜಸ್ ಪ್ರೀತ್ ಬುಮ್ರಾ ನೋಬಾಲ್ ಎಸೆಯುತ್ತಿರುವ ಫೋಟೋ ಹಾಕಿದ್ದ ಜೈಪುರ ಟ್ರಾಫಿಕ್ ಪೊಲೀಸರು ಇದೀಗ ಹೋರ್ಡಿಂಗ್ಸ್ ಗಳನ್ನು ತೆಗೆದು ಬುಮ್ರಾರ ಕ್ಷಮೆಯಾಚಿಸಿದ್ದಾರೆ. 
ಜೈಪುರ ಟ್ರಾಫಿಕ್ ಪೊಲೀಸರು ನಗರದ ಪ್ರಮುಖ ರಸ್ತೆಯೊಂದರಲ್ಲಿ ಸಂಚಾರ ನಿಯಮ ಪಾಲನೆಯ ಹೋರ್ಡಿಂಗ್ಸ್ ನಲ್ಲಿ ಜಸ್ ಪ್ರೀತ್ ಬುಮ್ರಾ ನೋಬಾಲ್ ಎಸೆಯುತ್ತಿರುವ ಫೋಟೋ ಹಾಕಿ, ಗೆರೆ ದಾಟಬೇಡಿ.. ಇದು ದುಬಾರಿಯಾಗಬಹುದು ಎಂದು ಸಂಚಾರ ನಿಯಮದ ಬಗ್ಗೆ  ಜಾಗೃತಿ ಮೂಡಿಸಲು ಯತ್ನಿಸಿದ್ದರು. ಈ ಹೋರ್ಡಿಂಗ್ಸ್ ವ್ಯಾಪಕ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. 
ಜೈಪುರ ಸಂಚಾರಿ ಪೊಲೀಸರ ಕಾರ್ಯದ ಕುರಿತು ಕಿಡಿಕಾರಿದ್ದ ಕ್ರಿಕೆಟಿಗ ಬುಮ್ರಾ 'ದೇಶಕ್ಕಾಗಿ ಆಡುತ್ತಿರುವ ಓರ್ವ ಆಟಗಾರನನ್ನು ನೀವೆಷ್ಟು ಗೌರವಿಸುತ್ತೀರಿ ಎಂಬುದು ಇದರಿಂದ ಸಾಬೀತಾಗಿದೆ. ಚಿಂತೆ ಬೇಡ ನಿಮ್ಮ ತಪ್ಪುಗಳನ್ನು ನಾನು ಮುಂದಿಟ್ಟುಕೊಂಡು ಹಾಸ್ಯ ಮಾಡುವುದಿಲ್ಲ ಎಂದು ಟ್ವೀಟಿಸಿದ್ದರು. 
ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ್ದ ಟ್ರಾಫಿಕ್ ಪೊಲೀಸ್ ಇಲಾಖೆ ನಾನು ಬುಮ್ರಾ ಅವರನ್ನು ಅವಮಾನಿಸುವುದಕ್ಕಾಗಲಿ ಅಥವಾ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಿಗೆ ನೋವುಂಟು ಮಾಡುವುದಕ್ಕಾಗಲಿ ನಾವು ಪೋಸ್ಟರ್ ಹಾಕಿಲ್ಲ. ಕೇವಲ ಸವಾರರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಬಳಸಿಕೊಂಡಿದ್ದೇವು. ನೀವು ಯೂತ್ ಐಕಾನ್ ನಮಗೆಲ್ಲರಿಗೂ ಮಾದರಿ ಎಂದು ಟ್ವೀಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com