ವಿಂಡೀಸ್ ವಿರುದ್ಧದ ಪಂದ್ಯಕ್ಕೆ ಚಾಂಪಿಯನ್ಸ್ ಟ್ರೋಫಿ ಜೆರ್ಸಿ ತೊಟ್ಟು ಯುವಿ ಯಡವಟ್ಟು!

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ದ್ವಿತೀಯ ಪಂದ್ಯ ಟೀಂ ಇಂಡಿಯಾ 105 ರನ್ ಗಳಿಂದ ಭರ್ಜರಿ ಜಯಗಳಿಸಿದ್ದು ಇದೇ ಪಂದ್ಯದಲ್ಲಿ ಸ್ಫೋಟಕ ...
ಯುವರಾಜ್ ಸಿಂಗ್
ಯುವರಾಜ್ ಸಿಂಗ್
ಪೋರ್ಟ್ ಆಫ್ ಸ್ಪೈನ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ದ್ವಿತೀಯ ಪಂದ್ಯ ಟೀಂ ಇಂಡಿಯಾ 105 ರನ್ ಗಳಿಂದ ಭರ್ಜರಿ ಜಯಗಳಿಸಿದ್ದು ಇದೇ ಪಂದ್ಯದಲ್ಲಿ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಯಡವಟ್ಟೊಂದನ್ನು ಮಾಡಿದ್ದಾರೆ. 
ಕ್ವೀನ್ಸ್ ಪಾರ್ಕ್ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ಅಜಿಂಕ್ಯ ರಹಾನೆ ಮತ್ತು ಶಿಖರ್ ಧವನ್ ಶತಕದ ಜತೆಯಾಟ ನೀಡಿದರು. ರಹಾನೆ 103 ಮತ್ತು ಧವನ್ 63 ರನ್ ಗಳಿಸಿದ್ದಾಗ ಔಟಾದರು. ನಂತರ ಬಂದ ಕೊಹ್ಲಿ ಆಟವಾಡುತ್ತಿದ್ದರು. ಈ ವೇಳೆ ನಾಲ್ಕನೇಯವರಾಗಿ ಯುವಿ ಬದಲಿಗೆ ಹಾರ್ದಿಕ್ ಪಾಂಡ್ಯ ಬಂದರು. ಸಿಡಿಲಿನ ಬ್ಯಾಟಿಂಗ್ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಪಾಂಡ್ಯ 4 ರನ್ ಗಳಿಗೆ ಔಟಾದರು. ಆತುರವಾಗಿ ಕಣಕ್ಕೆ ಬಂದ ಯುವರಾಜ್ ಸಿಂಗ್ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೊಡಬೇಕಿದ್ದ ಜೆರ್ಸಿ ಬದಲಿಗೆ ಚಾಂಪಿಯನ್ಸ್ ಟ್ರೋಫಿ ಜೆರ್ಸಿ ತೊಟ್ಟು ಬಂದಿದ್ದರು. 
ಯುವಿ ಚಾಂಪಿಯನ್ಸ್ ಟ್ರೋಫಿ ಜೆರ್ಸಿ ತೊಟ್ಟಿದ್ದು ಬಿಸಿ ಬಿಸಿ ಚರ್ಚೆಗೆ ಗ್ರಾಸವಾಯಿತು. ಕೊನೆಯ ಓವರ್ ಗಳಲ್ಲಿ ಬಿರುಸಿನ ಆಟವಾಡುತ್ತಾರೆ ಎಂದು ಭಾವಿಸಿದ್ದ ಪ್ರೇಕ್ಷಕರಿಗೆ ಯುವಿ ನಿರಾಸೆ ಮೂಡಿದರು. 10 ಎಸೆತಗಳಲ್ಲಿ 14 ರನ್ ಸಿಡಿಸಿ ಔಟಾಗಿ ಪೆವಿಲಿಯನ್ ಸೇರಿದರು. 
35 ವರ್ಷದ ಯುವರಾಜ್ ಸಿಂಗ್ 300 ಏಕದಿನ ಪಂದ್ಯವಾಡಿದ ಭಾರತದ ಐದನೇ ಆಟಗಾರ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ಮೊಹಮ್ಮದ್ ಅಜರುದ್ದೀನ್ 300 ಪಂದ್ಯ ಗಡಿ ದಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com