ಕೊಲೊಂಬೊ: ಟೀಂ ಇಂಡಿಯಾ ಕೋಚ್ ಆಗುವಷ್ಟು ಅನುಭವವಿಲ್ಲ, ತಾವು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವುದಿಲ್ಲ ಎಂದು ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಸ್ಪಷ್ಟಪಡಿಸಿದ್ದಾರೆ.
ಭಾರತ ಕೋಚ್ ಹುದ್ದೆಗೆ ಜಯವರ್ಧನೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಲಂಕಾ ಮಾಜಿ ಆಟಗಾರ ಈ ಸುದ್ದಿ ನನ್ನನ್ನು ಅಚ್ಚರಿಗೊಳಿಸಿದೆ. ಪೂರ್ಣಾವಧಿ ಹುದ್ದೆಗಳಿಗೆ ನಾನಿನ್ನೂ ಸಿದ್ಧವಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಗ್ರಾಹಂ ಫೋರ್ಡ್ ನಿರ್ಗಮನದಿಂದ ತೆರವುಗೊಂಡಿರುವ ಶ್ರೀಲಂಕಾ ತಂಡದ ಕೋಚ್ ಆಗಲು ಅವರಿಗೆ ಅನುಭವ ಸಾಲದು ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ತಿಲಂಗಾ ಸುಮತಿಪಾಲ ಹೇಳಿದ್ದಾರೆ.