ಉತ್ತಮ ಕೆಲಸಗಳನ್ನು ಮಾಡಿದ್ದರೂ ಕಳೆದ ವರ್ಷ ರವಿ ಶಾಸ್ತ್ರಿ ಅವರನ್ನು ಕಡೆಗಣಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ರವಿ ಶಾಸ್ತ್ರಿ ಹಿಂದೇಟು ಹಾಕಿದ್ದರು, ಸಚಿನ್ ಹಾಗೂ ರವಿ ಶಾಸ್ತ್ರಿ ಲಂಡನ್ ನಲ್ಲೇ ಇದ್ದು, ಸಚಿನ್ ತೆಂಡೂಲ್ಕರ್ ಶಾಸ್ತ್ರಿ ಅವರೊಂದಿಗೆ ಮಾತನಾಡಿ ಮನವೊಲಿಕೆ ಮಾಡಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.