ಅಶ್ವಿನ್-ಮಿಚೆಲ್ ಸ್ಟಾರ್ಕ್
ಕ್ರಿಕೆಟ್
ಮುಕುಂದ್‍ರನ್ನು ಕಿಚಾಯಿಸಿದ್ದ ಸ್ಟಾರ್ಕ್‌ಗೆ ತಿರುಗೇಟು ನೀಡಿದ ಅಶ್ವಿನ್
ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಬೆಂಗಳೂರಿನಲ್ಲಿ ನಡೆದಿದ್ದು ಈ ಪಂದ್ಯ ಹಲವು ವೈಯಕ್ತಿಕ ವಿಷಯಗಳಿಗೆ ಸುದ್ದಿಯಾಗಿದೆ...
ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಬೆಂಗಳೂರಿನಲ್ಲಿ ನಡೆದಿದ್ದು ಈ ಪಂದ್ಯ ಹಲವು ವೈಯಕ್ತಿಕ ವಿಷಯಗಳಿಗೆ ಸುದ್ದಿಯಾಗಿದೆ. ಇದರಲ್ಲಿ ಒಂದು ಭಾರತ ಅಭಿನವ್ ಮುಕುಂದ್ ರನ್ನು ಕಿಚಾಯಿಸಿದ ಮಿಚೆಲ್ ಸ್ಟಾರ್ಕ್ ಗೆ ಅಶ್ವಿನ್ ತಿರುಗೇಟು ನೀಡಿದ್ದಾರೆ.
ದ್ವಿತೀಯ ಇನ್ನಿಂಗ್ಸ್ ನಲ್ಲಿ ಅಭಿನವ್ ಮುಕುಂದ್ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಸಿಕ್ಸರ್ ಬಾರಿಸಿದರು . ಈ ವೇಳೆ ಮುಕುಂದ್ ಕಡೆ ತಿರುಗಿದ ಸ್ಟಾರ್ಕ್ ತಮ್ಮ ಹಣೆಗೆ ಬೆರಳಿನಿಂದ ತಿವಿದುಕೊಳ್ಳುತ್ತಾ ಹಣೆ ಗಟ್ಟಿಯಾಗಿದೆಯೇ ನೋಡಿಕೋ ಎಂಬಂತೆ ತೋರಿಸಿದರು. ಇದು ಭಾರತೀಯ ಅಭಿಮಾನಿಗಳನ್ನು ಕೆರಳಿಸಿತ್ತು.
ಇದರಿಂದ ಕೆರಳಿದ ಆರ್ ಅಶ್ವಿನ್ ಆಸ್ಟ್ರೇಲಿಯಾದ ದ್ವಿತೀಯ ಇನ್ನಿಂಗ್ಸ್ ನಲ್ಲಿ ಮಿಚೆಲ್ ಸ್ಟಾರ್ಕ್ ರನ್ನು ಬೌಲ್ಡ್ ಮಾಡುವ ಮೂಲಕ ಮೈದಾನದಲ್ಲಿ ಸ್ಟಾರ್ಕ್ ಕಡೆ ತಿರುಗಿದ ಅಶ್ವಿನ್ ತಮ್ಮ ಹಣೆಯನ್ನು ತಿವಿದುಕೊಳ್ಳುತ್ತಾ ನಿನ್ನೆ ಹಣೆ ಗಟ್ಟಿಯಾಗಿದೆಯೆ ನೋಡಿಕೋ ಎಂಬಂತೆ ತೋರಿಸಿ ಸ್ಟಾರ್ಕ್ ಗೆ ತಿರುಗೇಟು ನೀಡಿದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ