ಟೀಂ ಇಂಡಿಯಾ
ಕ್ರಿಕೆಟ್
2019ರ ಏಕದಿನ ವಿಶ್ವಕಪ್‌ಗೆ ಟೀಂ ಇಂಡಿಯಾ ನೇರ ಪ್ರವೇಶ?
ಇಂಗ್ಲೆಂಡ್ ನಲ್ಲಿ ನಡೆಯಲಿರುವ 2019ರ ಏಕದಿನ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ನೇರವಾಗಿ ಪ್ರವೇಶ ಪಡೆಯುವ ಸಾಧ್ಯತೆ ಇದೆ...
ನವದೆಹಲಿ: ಇಂಗ್ಲೆಂಡ್ ನಲ್ಲಿ ನಡೆಯಲಿರುವ 2019ರ ಏಕದಿನ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ನೇರವಾಗಿ ಪ್ರವೇಶ ಪಡೆಯುವ ಸಾಧ್ಯತೆ ಇದೆ.
ಏಕದಿನ ವಿಶ್ವಕಪ್ ನಲ್ಲಿ 10 ತಂಡಗಳು ಸ್ಥಾನ ಪಡೆಯಲಿದ್ದು, 2017ರ ಸೆಪ್ಟೆಂಬರ್ 30ರೊಳಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅಗ್ರ ಶ್ರೇಂಯಾಂಕಿತ 8 ತಂಡಗಳು ನೇರ ಪ್ರವೇಶ ಪಡೆಯಲಿವೆ. ಉಳಿದ 2 ತಂಡಗಳು ಬಾಂಗ್ಲಾದಲ್ಲಿ ನಡೆಯಲಿರುವ ಅರ್ಹತಾ ಸುತ್ತಿನಲ್ಲಿ ಗೆದ್ದು ಪ್ರವೇಶ ಪಡೆಯಬೇಕಿದೆ.
ಸದ್ಯ ಭಾರತ 6261 ಅಂಕಗಳೊಂದಿಗೆ ಐಸಿಸಿ ರ್ಯಾಂಕಿಂಗ್ ನಲ್ಲಿ 4ನೇ ಸ್ಥಾನದಲ್ಲಿದ್ದು ಸೆಪ್ಟೆಂಬರ್ ವರೆಗೆ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಭಾರತ, ಶ್ರೀಲಂಕಾ ತಂಡದ ಶ್ರೇಯಾಂಕದಲ್ಲಿ ಬದಲಾವಣೆ ಆಗುವ ಸಾಧ್ಯತೆ ಕಡಿಮೆ ಇರುವುದರಿಂದ ಈ ತಂಡಗಳು ನೇರವಾಗಿ ಅರ್ಹತೆ ಪಡೆಯಲಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ