3ನೇ ಟೆಸ್ಟ್: ಸ್ಮಿತ್‌ ಶತಕ, ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 299/4

ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ, ಸ್ವೀವನ್‌ ಸ್ಮಿತ್‌ ಶತಕದ....
ಸ್ಟೀವನ್ ಸ್ಮಿತ್
ಸ್ಟೀವನ್ ಸ್ಮಿತ್
ರಾಂಚಿ: ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ, ಸ್ವೀವನ್‌ ಸ್ಮಿತ್‌ ಶತಕದ ನೆರವಿನೊಂದಿಗೆ ಮೊದಲ ದಿನದಾಟದಲ್ಲಿ 4 ವಿಕೆಟ್‌ ಕಳೆದುಕೊಂಡು 299ರನ್‌ ಗಳಿಸಿ, ಭಾರತಕ್ಕೆ ಸವಾಲಿನ ಮೊತ್ತ ಕಲೆಹಾಕುವ ಸೂಚನೆ ನೀಡಿದೆ.
ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಆಸಿಸ್ ಡೇವಿಡ್‌ ವಾರ್ನರ್‌(19) ಹಾಗೂ ಮ್ಯಾಟ್‌ ರೆನ್ಶಾ(44) ಅರ್ಧ ಶತಕದ ಜೊತೆಯಾಟ ನೀಡಿದರು. ವಾರ್ನರ್‌ ವಿಕೆಟ್‌ ಒಪ್ಪಿಸಿದ ಬಳಿಕ ಕಣಕ್ಕಿಳಿದ ನಾಯಕ ಸ್ವೀವನ್‌ ಸ್ಮಿತ್‌ ನಾಯಕನ ಆಟವಾಡಿ 13 ಬೌಂಡರಿ ಸಹಿತ ಭರ್ಜರಿ ಶತಕ ದಾಖಲಿಸಿ ಭಾರತೀಯ ಬೌಲರ್‌ಗಳನ್ನು ಕಾಡಿದರು.
ಒಂದು ಹಂತದಲ್ಲಿ 140 ರನ್‌ ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ಆಸ್ಟ್ರೇಲಿಯನ್ನರನ್ನು ಭಾರತ ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕುವ ನಿರೀಕ್ಷೆ ಮೂಡಿಸಿತ್ತು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಗ್ಲೇನ್‌ ಮ್ಯಾಕ್ಸ್‌ವೆಲ್‌(82) ನಾಯಕನ ಜೊತೆಗೂಡಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಸದ್ಯ 5ನೇ ವಿಕೆಟ್‌ಗೆ 159ರನ್‌ ಜೊತೆಯಾಟವಾಡಿರುವ ಈ ಜೋಡಿ ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದೆ.
ಭಾರತ ಪರ ಉಮೇಶ್‌ ಯಾದವ್‌ 2, ಅಶ್ವಿನ್‌ ಹಾಗೂ ಜಡೇಜಾ ತಲಾ 1 ವಿಕೆಟ್‌ ಪಡೆದಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಸಮಬಲ ಸಾಧಿಸರುವ ಉಭಯ ತಂಡಗಳು ಈಗ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತವರಿನಲ್ಲಿ ಟ್ರೋಫಿಗಾಗಿ ತೀವ್ರ ಹಣಾಹಣಿಸುತ್ತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com