ಕೊಹ್ಲಿ ಬಹುದೊಡ್ಡ ರಾಯಭಾರಿ, ನಾವೆಲ್ಲರೂ ಅವರನ್ನು ಬೆಂಬಲಿಸುತ್ತೇವೆ: ಚೇತೇಶ್ವರ ಪೂಜಾರ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಹಾಗೂ 4ನೇ ಟೆಸ್ಟ್ ಪಂದ್ಯ ಶನಿವಾರ ಆರಂಭವಾಗಲಿದೆ, ಈ ಹಿನ್ನೆಲೆಯಲ್ಲಿ ಮಾತನಾಡಿರುವ ಟೀಂ ಇಂಡಿಯಾ ...
ಚೇತೇಶ್ವರ ಪೂಜಾರಾ ಮತ್ತು ವಿರಾಟ್ ಕೊಹ್ಲಿ
ಚೇತೇಶ್ವರ ಪೂಜಾರಾ ಮತ್ತು ವಿರಾಟ್ ಕೊಹ್ಲಿ

ಧರ್ಮಶಾಲಾ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಹಾಗೂ 4ನೇ ಟೆಸ್ಟ್ ಪಂದ್ಯ ಶನಿವಾರ ಆರಂಭವಾಗಲಿದೆ, ಈ ಹಿನ್ನೆಲೆಯಲ್ಲಿ ಮಾತನಾಡಿರುವ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಆಟಗಾರ ಚೇತೇಶ್ವ ಪೂಜಾರ ಕಾಂಗರೂಗಳ ಮೈಂಡ್ ಗೇಮ್ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ದೊಡ್ಡ ನಾಯಕ, ಕೊಹ್ಲಿ ತಂತ್ರದ ಮುಂದೆ ಆಸ್ಟ್ರೇಲಿಯಾ ಆಟಗಾರರ ತಂತ್ರ ವರ್ಕ್ ಔಟ್ ಆಗುವುದಿಲ್ಲ ಎಂದು ಹೇಳಿದ್ದಾರೆ.

ರಾಂಚಿಯಲ್ಲಿ ನಡೆದ ಹಿಂದಿನ ಟೆಸ್ಟ್ ನಲ್ಲಿ ಪೂಜಾರಾ  ದ್ವಿ ಶತಕ ಭಾರಿಸಿದ್ದರು. ಕೊಹ್ಲಿ ವಿರುದ್ಧ ಆಸ್ಟ್ರೇಲಿಯಾ ಆಟಗಾರರ ಟೀಕೆಗಳು ಸರಿಯಲ್ಲ, ನಮ್ಮ ಗೇಮ್ ನ ಬಹುದೊಡ್ಡ ರಾಯಭಾರಿ ವಿರಾಟ್ ಕೊಹ್ಲಿ, ಅವರಿಗೆ ನಾವು ನಮ್ಮ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ.

ನಮ್ಮ ಫೋಕಸ್ ಬೇರೆಡೆ ಎಲ್ಲೋ ವರ್ಗಾವಣೆಯಾಗಿದೆ ಎನಿಸುತ್ತಿದೆ, ಹೀಗಾಗಿ ನಮ್ಮ ಆಟದ ಕಡೆಗೆ ಇನ್ನು ಮುಂದೆ ನಾವು ಹೆಚ್ಚಿನ ಗಮನ ಹರಿಸುತ್ತೇವೆ. ಮುಂದಿನ ಪಂದ್ಯದಲ್ಲಿ ಬೇರೆ ಯಾವುದೇ ವಿಷಯದ ಬಗ್ಗೆ ಗಮನ ಕೊಡದೇ ಕೇವಲ ಆಟದ ಕಡೆ ಮಾತ್ರ ಕೇಂದ್ರೀಕರಿಸುತ್ತೇವೆ ಎಂದು 29 ವರ್ಷದ ಸೌರಾಷ್ಟ್ರದ ಬ್ಯಾಟ್ಸ್ ಮನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com