ಆರ್ ಅಶ್ವಿನ್ ಗೆ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ಪ್ರದಾನ

ತಮ್ಮ ಆಮೋಘ ಪ್ರದರ್ಶನದ ಮೂಲಕ ಐಸಿಸಿಯ ಕ್ರಿಕೆಟ್ ಪ್ರಶಸ್ತಿಗೆ ಭಾಜನರಾಗಿದ್ದ ಭಾರತದ ಸ್ಪಿನ್ನರ್ ಆರ್ ಅಶ್ವಿನ್ ಅವರಿಗೆ ಮಂಗಳವಾರ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಆರ್ ಅಶ್ವಿನ್ ಗೆ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ಪ್ರದಾನ!
ಆರ್ ಅಶ್ವಿನ್ ಗೆ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ಪ್ರದಾನ!
Updated on

ಧರ್ಮಶಾಲಾ: ತಮ್ಮ ಆಮೋಘ ಪ್ರದರ್ಶನದ ಮೂಲಕ ಐಸಿಸಿಯ ಕ್ರಿಕೆಟ್ ಪ್ರಶಸ್ತಿಗೆ ಭಾಜನರಾಗಿದ್ದ ಭಾರತದ ಸ್ಪಿನ್ನರ್ ಆರ್ ಅಶ್ವಿನ್ ಅವರಿಗೆ ಮಂಗಳವಾರ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಳೆದ ಜನವರಿಯಲ್ಲಿ ಪ್ರಕಟವಾಗಿದ್ದ ಐಸಿಸಿ ಕ್ರಿಕೆಟ್ ಪ್ರಶಸ್ತಿ ಪಟ್ಟಿಯಲ್ಲಿ ಭಾರತದ ಆಫ್ ಸ್ಪಿನ್ನರ್ ಆರ್ ಆಶ್ವಿನ್ ಐಸಿಸಿ ವರ್ಷದ ಕ್ರಿಕೆಟಿಗ ಹಾಗೂ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿಗೆ ಭಾಜನರಾಗಿದ್ದರು. ಇಂದು ಧರ್ಮಶಾಲಾದಲ್ಲಿ  ನಡೆದ ಅಂತಿಮ ಟೆಸ್ಟ್ ಮುಕ್ತಾಯದ ಬಳಿಕ ಅಶ್ವಿನ್ ಅವರಿಗೆ ಈ ಎರಡೂ ಪ್ರಶಸ್ತಿಗಳನ್ನು ಅಧಿಕೃತವಾಗಿ ಪ್ರದಾನ ಮಾಡಲಾಯಿತು. ಈ ವೇಳೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಶಸ್ತಿ ವಿಜೇತ ಕ್ರಿಕೆಟಿಗ ಆರ್ ಅಶ್ವಿನ್, ನಿಜಕ್ಕೂ  ನನ್ನ ಕನಸೊಂದು ನನಾಸಾದ ವಿಶೇಷ ದಿನ ಇದು. ಉತ್ತಮ ಪ್ರದರ್ಶನದ ಮೂಲಕ ತಂಡ ಉತ್ತಮ ಸಾಧನೆಗೈಯಲು ನಾನು ಪ್ರಯತ್ನಿಸಿದ್ದೆ. ಎಲ್ಲ ಬಗೆಯ ಕ್ರಿಕೆಟ್ ಮಾದರಿಗಳಲ್ಲೂ ನಾವು ಒಂದು ತಂಡವಾಗಿ ಆಡಿದ್ದೇವೆ. ಇದಕ್ಕೆ  ನಮಗೆ ದೊರೆತ ಗೆಲುವುಗಳೇ ಸಾಕ್ಷಿ ಎಂದು ಅಶ್ವಿನ್ ಹೇಳಿದರು.

ಪ್ರಮುಖವಾಗ ನಮ್ಮ ತಂಡದ ಹಾಗೂ ನನ್ನ ಯಶಸ್ಸಿನಲ್ಲಿ ಇಡೀ ತಂಡದ ಸದಸ್ಯರು ಹಾಗೂ ತಂಡದ ನಿರ್ವಾಹಕರ ತಂಡದ ದೊಡ್ಡ ಕೊಡುಗೆ ಇದ್ದು, ಪ್ರತಿಯೊಬ್ಬರಿಗೂ ನಾನು ಧನ್ಯವಾದ ತಿಳಿಸುತ್ತೇನೆ. ಪ್ರಮುಖವಾಗಿ ನನ್ನ  ಕುಟುಂಬ ಮತ್ತು ಪಂದ್ಯದ ನಡುವೆಯೇ ನನ್ನ ಅಂಕಲ್ ಗೆ ನಾನು ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. ನನ್ನ ಕುಟುಂಬದ ಬೆಂಬಲವಿಲ್ಲದೇ ಹೋಗಿದ್ದರೇ ನಾನು ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗುತ್ತಿರಲಿಲ್ಲ. ಮುಂದಿನ  ದಿನಗಳಲ್ಲಿ ಮತ್ತಷ್ಟು ಯಶಸ್ಸು ಸಾಧಿಸುವ ಭರವಸೆ ಇದೆ ಎಂದು ಅಶ್ವಿನ್ ಹೇಳಿದರು.

ಇದೇ ವೇಳೆ ಅಶ್ವಿನ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರು, ವಿಶ್ವ ಕ್ರಿಕೆಟ್ ಗೆ ಭಾರತ ಸದಾಕಾಲ ಉತ್ತಮ ಸ್ಪಿನ್ನರ್ ಗಳನ್ನು ನೀಡುತ್ತಾ ಬಂದಿದೆ. ಆ ಪಟ್ಟಿಗೆ ಅಶ್ವಿನ್ ಮತ್ತು ರವೀಂದ್ರ  ಜಡೇಜಾ ಇತ್ತೀಚಿನ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಐಸಿಸಿ ಪ್ರಧಾನ ಕಾರ್ಯ ನಿರ್ವಾಹಕ ಅಧಿಕಾರಿ ಡೇವಿಡ್ ರಿಚರ್ಡ್ ಸನ್ ಅವರು, ನಿಜಕ್ಕೂ ಅಶ್ವಿನ್ ಓರ್ವ ಅದ್ಭುತ ಆಟಾಗಾರ,  ಅಗತ್ಯ ಬಿದ್ದಾಗಲೆಲ್ಲಾ ತಮ್ಮ ಉತ್ತಮ ಪ್ರದರ್ಶನ ತೋರಿದ ಅಶ್ವಿನ್ ತಂಡಕ್ಕೆ ನೆರವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com