ಪಾಂಡ್ಯ ಸಹೋದರರ ಟ್ವೀಟ್ ವಾರ್: ಬುದ್ದಿ ಹೇಳಿ ಬ್ರೇಕ್ ಹಾಕಿದ ವಿರೇಂದ್ರ ಸೆಹ್ವಾಗ್

ಪ್ರಸಕ್ತ ಐಪಿಎಲ್‌ ಸೀಸನ್ ನಲ್ಲಿ ಮುಂಬೈ ಪರ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಸಹೋದರರ ಟ್ವೀಟ್ ವಾರ್ ಎಲ್ಲೆಡೆ ಚರ್ಚೆಗೆ ...
ವಿರೇಂದ್ರ ಸೆಹ್ವಾಗ್
ವಿರೇಂದ್ರ ಸೆಹ್ವಾಗ್
Updated on: 
ನವದೆಹಲಿ: ಪ್ರಸಕ್ತ ಐಪಿಎಲ್‌ ಸೀಸನ್ ನಲ್ಲಿ ಮುಂಬೈ ಪರ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಸಹೋದರರ ಟ್ವೀಟ್ ವಾರ್ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಟ್ವಿಟರ್ ಕಿಂಗ್ ಅಂತಲೇ ಹೆಸರುವಾಸಿಯಾಗಿರುವ ವೀರೇಂದ್ರ ಸೆಹ್ವಾಗ್ ಬಾಲಿವುಡ್ ಗೀತೆಯೊಂದನ್ನು ಉದಾಹರಣೆಯಾಗಿಟ್ಟುಕೊಂಡು ಇಬ್ಬರು ಸಹೋದರರಿಗೆ ಜಗಳ ಆಡದಂತೆ ಕಿವಿಮಾತು ಹೇಳಿದ್ದಾರೆ.
ಶನಿವಾರ ಮುಂಬೈ ಇಂಡಿಯನ್ಸ್ ಮತ್ತು ಕೆಕೆಆರ್ ನಡುವಿನ ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ, ಕೆಲವೊಮ್ಮೆ ಜೀವನದಲ್ಲಿ ನಮಗೆ ಆತ್ಮೀಯರು ಎನಿಸಿಕೊಂಡವರೇ ಹೆಚ್ಚಾಗಿ ನಿರಾಸೆ ಮೂಡಿಸುತ್ತಾರೆ. ಇದು ಸರಿಯಲ್ಲ ಸಹೋದರ  ಎಂದು ಟ್ವೀಟ್ ಮಾಡಿದ್ದರು.
ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿದ ಕೃನಾಲ್ ಪಾಂಡ್ಯ, ಈ ರೀತಿ ಆಗಬಾರದಿತ್ತು, ಆಗಿ ಹೋಗಿದೆ. ಇದನ್ನು ಮತ್ತಷ್ಟು ಎಳೆದಾಡುವುದು ಬೇಡ. ಜತೆಗೆ ನಾನು ನಿನಗಿಂತ ದೊಡ್ಡವನು ಅನ್ನುವುದು ಗೊತ್ತಿರಲಿ ರಿಟ್ವೀಟ್ ಮಾಡಿದ್ದಾರೆ
ಈ ವೇಳೆ ಮಧ್ಯ ಪ್ರವೇಶಿಸಿದ ವೀರೇಂದ್ರ ಸೆಹ್ವಾಗ್ ಬಾಲಿವುಡ್ ಗೀತೆಯೊಂದನ್ನು ಉದಾಹರಣೆಯಾಗಿಟ್ಟುಕೊಂಡು ಇಬ್ಬರು ಸಹೋದರರಿಗೆ ಜಗಳ ಆಡದಂತೆ ಕಿವಿಮಾತು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com