ಡಗ್ ಬ್ರಾಸ್ ವೆಲ್
ಕ್ರಿಕೆಟ್
ಸಾಕು ಗಿಣಿ ಸಾವಿನ ದುಃಖಕ್ಕೆ ಕುಡಿದು ಪೊಲೀಸರ ಅತಿಥಿಯಾದ ಕ್ರಿಕೆಟಿಗ ಬ್ರಾಸ್ ವೆಲ್!
ಸಾಕು ಗಿಣಿ ಸಾವನ್ನಪ್ಪಿದ ದುಃಖಕ್ಕೆ ನ್ಯೂಜಿಲೆಂಡ್ ವೇಗಿ ಡಗ್ ಬ್ರಾಸ್ ವೆಲ್ ಕುಡಿದು ವಾಹನ ಚಲಾಯಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ...
ವೆಲ್ಲಿಂಗ್ಟನ್: ಸಾಕು ಗಿಣಿ ಸಾವನ್ನಪ್ಪಿದ ದುಃಖಕ್ಕೆ ನ್ಯೂಜಿಲೆಂಡ್ ವೇಗಿ ಡಗ್ ಬ್ರಾಸ್ ವೆಲ್ ಕುಡಿದು ವಾಹನ ಚಲಾಯಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಇನ್ನು 26 ವರ್ಷದ ಬ್ರಾಸ್ ವೆಲ್ ಗೆ ನೈಜ ಕಾಳಜಿಯ ಆಧಾರದ ಮೇರೆಗೆ ನ್ಯಾಯಾಲಯ 100 ಗಂಟೆ ಸಾರ್ವಜನಿಕ ಸೇವೆ ಮಾಡಬೇಕೆಂದು ಶಿಕ್ಷೆ ವಿಧಿಸಿದೆ.
ತಮ್ಮ ಪ್ರೀತಿಯ ಗಿಣಿಯನ್ನು ನಾಯಿ ಕಚ್ಚಿ ಸಾಯಿಸಿದೆ ಎಂದು ಮನೆಯಿಂದ ಬಂದ ಕರೆಯಿಂದ ದುಃಖಿತರಾದ ಬ್ರಾಸ್ ವೆಲ್ ಒತ್ತಡಕ್ಕೆ ಕುಡಿದು ವಾಹನ ಚಲಾಯಿಸಿದರು ಎಂದು ವಿಚಾರಣೆ ವೇಳೆ ಒಪ್ಪಿಕೊಂಡರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ