ಜೂನ್ 1ರಿಂದ ಇಂಗ್ಲೆಂಡ್ ನಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭಗೊಳ್ಳಲಿದ್ದು ಟೀಂ ಇಂಡಿಯಾವನ್ನು ಹುರಿದುಂಬಿಸುವ ಸಲುವಾಗಿ ಸುಧೀರ್ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾರೆ. ಸುಧೀರ್ ಫಾಸ್ಟ್ ಟ್ರ್ಯಾಕ್ ವೀಸಾವೊಂದಕ್ಕೆ ಅರ್ಜಿ ಹಾಕಿದ್ದರು. ಸಾಮಾನ್ಯ ವೀಸಾಕ್ಕೆ 7,500 ರೂ.ಗಳಾದರೆ ಫಾಸ್ಟ್ ಟ್ರ್ಯಾಕ್ ವೀಸಾಕ್ಕೆ 26 ಸಾವಿರ ರು ಆಗುತ್ತದೆ. ಈ ವೀಸಾ ಮೂರೇ ದಿನಕ್ಕೆ ಸುಧೀರ್ ಕೈಸೇರಿತ್ತು. ಈ ಕುರಿತಂತೆ ಸಚಿನ್ ತೆಂಡೂಲ್ಕರ್ ವೀಸಾ ಕಚೇರಿಯ ಅಧಿಕಾರಿಗಳಿಗೆ ಶಿಫಾರಸು ಮಾಡಿ ಅಭಿಮಾನಿಗೆ ನೆರವಾಗಿದ್ದರು.