ಚೆನ್ನೈ: ಅನಾರೋಗ್ಯದಿಂದ ಬಳಲುತ್ತಿದ್ದ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ಆರ್ ಅಶ್ವಿನ್ ಅವರ ಅಜ್ಜ ಎಸ್ ನಾರಾಯಣಸ್ವಾಮಿ ನಿಧನರಾಗಿದ್ದಾರೆ.
92 ವರ್ಷದ ನಾರಾಯಣಸ್ವಾಮಿ ಅವರು ದೀರ್ಘಕಾಲದ ಅಸೌಖ್ಯದಿಂದ ಬಳುತ್ತಿದ್ದು ಮೃತಪಟ್ಟಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.
ತಂದೆ ನಾರಾಯಣ ಸ್ವಾಮಿ ರೈಲ್ವೇಸ್ ಉದ್ಯೋಗಿಯಾಗಿದ್ದರು. ಕ್ರಿಕೆಟ್ ಬಗ್ಗೆ ಅವರಿಗೆ ಅಪಾರ ಆಸಕ್ತಿ ಇತ್ತು. ಅಶ್ವಿನ್ ಗೂ ಸೂಕ್ತ ಸಲಹೆ ಸೂಚನೆ ನೀಡುತ್ತಿದ್ದರು ಎಂದು ಅಶ್ವಿನ್ ತಂದೆ ರವಿಚಂದ್ರನ್ ತಿಳಿಸಿದ್ದಾರೆ.
ಸದ್ಯ ಚಾಂಪಿಯನ್ಸ್ ಟ್ರೋಫಿಗಾಗಿ ಆರ್ ಅಶ್ವಿನ್ ಇಂಗ್ಲೆಂಡ್ ಗೆ ತೆರಳಿದ್ದು ಅಶ್ವಿನ್ ಭಾರತಕ್ಕೆ ಬಂದು ಅಜ್ಜನ ಅಂತಿಮ ಸಂಸ್ಕಾರದ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.