ಪುಣೆ: ಪುಣೆಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎ ಗುಂಪಿನ ಮೂರನೇ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಇನ್ನಿಂಗ್ಸ್ ಮತ್ತು 136 ರನ್ ಅಂತರದ ಭರ್ಜರಿ ಜಯ ದಾಖಲಿಸಿದೆ. ಕರ್ನಾಟಕದ ವೇಗದ ಬೌಲರ್ ಅಭಿಮನ್ಯು ಮಿಥುನ್‍ರ ಬೌಲಿಂಗ್ ದಾಳಿಗೆ ನಲುಗಿದ ಮಹಾರಾಷ್ಟ್ರ ತಂಡ ಸೋಲೊಪ್ಪಿಕೊಂಡಿದೆ. ಇದೇ ವೇಳೆ ಆಡಿರುವ ಮೂರು ಪಂದ್ಯಗಳಲ್ಲಿಯೂ ವಿಜಯ ದಾಖಲಿಸಿರುವ ಕರ್ನಾಟಕಗ್ರಸ್ಥಾನ ತನ್ನದಾಗಿಸಿಕೊಂಡಿದೆ.
ಪಂದ್ಯದ ಅಂತಿಮ ದಿನವಾದ ಇಂದು ಆಟ ಮುಂದುವರಿಸಿದ ಮಹಾರಾಷ್ಟ್ರ 247 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು. ಕರ್ನಾಟಕದ ಅಭಿಮನ್ಯು ಮಿಥುನ್ 5 ವಿಕೆಟ್ ಪಡೆದು ಮಿಂಚಿದರು.
ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್ ನಲ್ಲಿ ಸಹ 245 ರನ್ ಗಳಿಗೆ ಸರ್ವಪತನವಾಗಿದ್ದ ಮಹಾರಾಷ್ಟ್ರದವರ ಆಟಕ್ಕೆ ಉತ್ತರವಾಗಿ ಕರ್ನಾಟಕ ಐದು ವಿಕೆಟ್ ನಷ್ಟಕ್ಕೆ 628 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಇದರೊಡನೆ ಇನ್ನಿಂಗ್ಸ್ ನಲ್ಲಿ 383 ರನ್ ಮುನ್ನಡೆ ಸಾಧಿಸಿತ್ತು.
ಸ್ಕೋರ್ ವಿವರ:
ಮಹಾರಾಷ್ಟ್ರ ಮೊದಲ ಇನ್ನಿಂಗ್ಸ್: 245 ರನ್, ದ್ವಿತೀಯ ಇನ್ನಿಂಗ್ಸ್ 247 ರನ್, ಕರ್ನಾಟಕ ಮೊದಲ ಇನ್ನಿಂಗ್ಸ್:628/5 ಡಿಕ್ಲೇರ್