ಭಾರತೀಯ ಕ್ರಿಕೆಟಿಗರಿಗೆ ಡೋಪಿಂಗ್ ಟೆಸ್ಟ್: ನಾಡಾ ಬೇಡಿಕೆಯನ್ನು ತಿರಸ್ಕರಿಸಿದ ಬಿಸಿಸಿಐ

ಭಾರತೀಯ ಕ್ರಿಕೆಟಿಗರನ್ನು ಉದ್ದೀಪನ ಮದ್ದು ಪರೀಕ್ಷೆಗೆ ಒಳಪಡಿಸಬೇಕೆಂಬ ರಾಷ್ಟ್ರೀಯ ಉದ್ದೀಪನಾ ಮದ್ದು ಸೇವನೆ ತಡೆ ಘಟಕ(ನಾಡಾ)ದ ಬೇಡಿಕೆಯನ್ನು ಭಾರತೀಯ...
ಭಾರತೀಯ ಕ್ರಿಕೆಟಿಗರು
ಭಾರತೀಯ ಕ್ರಿಕೆಟಿಗರು
ನವದೆಹಲಿ: ಭಾರತೀಯ ಕ್ರಿಕೆಟಿಗರನ್ನು ಉದ್ದೀಪನ ಮದ್ದು ಪರೀಕ್ಷೆಗೆ ಒಳಪಡಿಸಬೇಕೆಂಬ ರಾಷ್ಟ್ರೀಯ ಉದ್ದೀಪನಾ ಮದ್ದು ಸೇವನೆ ತಡೆ ಘಟಕ(ನಾಡಾ)ದ ಬೇಡಿಕೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಿರಸ್ಕರಿಸಿದೆ.
ಈ ಹಿಂದೆ ವಿಶ್ವ ಉದ್ದೀಪನ ಮದ್ದು ತಡೆಘಟಕ(ವಾಡಾ) ಕೇಂದ್ರ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಆ ಪತ್ರದಲ್ಲಿ ಭಾರತೀಯ ಕ್ರಿಕೆಟಿಗರಿಗೂ ಡೋಪಿಂಗ್ ಟೆಸ್ಟ್ ನಡೆಸುವಂತೆ ಬರೆದಿತ್ತು. ಈ ಸಂಬಂಧ ಕ್ರೀಡಾ ಸಚಿವಾಲವು ರಾಷ್ಟ್ರೀಯ ವಿರೋಧಿ ಡೋಪಿಂಗ್ ಏಜೆನ್ಸಿ(ನಾಡ)ಗೆ ಅನುಮತಿ ನೀಡಿತ್ತು. ಅಲ್ಲದೆ ಈ ನೀತಿ ಸಂಹಿತೆಯನ್ನು ಪುರಸ್ಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಬಿಸಿಸಿಐಗೆ ಇದೆ ಎಂದು ಹೇಳಿತ್ತು. 
ಈ ಸಂಬಂಧ ನಾಡಾದ ಮುಖ್ಯಸ್ಥ ನವೀನ್ ಅಗರವಾಲ್ ನವೆಂಬರ್ 8ರಂದು ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಅವರಿಗೆ ಪತ್ರ ಬರೆದಿದ್ದು ಅದರಲ್ಲಿ ಭಾರತೀಯ ಕ್ರಿಕೆಟಿಗರು ಡೋಪಿಂಗ್ ಟೆಸ್ಟ್ ನಡೆಸುವ ವಿಚಾರವನ್ನು ಸ್ಪಷ್ಟಪಡಿಸುವಂತೆ ಸೂಚಿಸಿತ್ತು. ಈ ಬೇಡಿಕೆಯನ್ನು ತಿಸ್ಕರಿಸಿರುವ ಬಿಸಿಸಿಐ ಮಂಡಳಿ ರಾಷ್ಟ್ರೀಯ ಕ್ರೀಡಾ ಒಕ್ಕೂಟದ ಅಡಿಯಲ್ಲಿ ಬರುವುದಿಲ್ಲ. ಅಲ್ಲದೆ ಬಿಸಿಸಿಐ ಆಯೋಜಿಸುವ ದೇಶಿಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಾವಳಿಗಳ ಆಟಗಾರರ ಡೋಪಿಂಗ್ ಟೆಸ್ಟ್ ನಡೆಸಲು ನಾಡಾದ ಕಾನೂನಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಜೋಹ್ರಿ ಸ್ಪಷ್ಟಪಡಿಸಿದ್ದಾರೆ. 
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಿಂದ 2016ರಲ್ಲಿ ಮಾನ್ಯತೆ ಪಡೆದಿದ್ದ ಭಾರತೀಯ ಕ್ರಿಕೆಟಿಗನೊಬ್ಬ ನಿಷೇಧಿತ ಮದ್ದು ಸೇವನೆ ಮಾಡಿದ್ದು, ವಿಶ್ವ ಉದ್ದೀಪನ ಮದ್ದು ತಡೆ ಘಟಕ(ವಾಡಾ) ನಡೆಸಿದ್ದ ಡೋಪಿಂಗ್ ಟೆಸ್ಟ್ ನಲ್ಲಿ ಆಟಗಾರನೊಬ್ಬ ಸಿಕ್ಕಿಬಿದ್ದಿದ್ದ ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟಿಗೂ ಡೋಪಿಂಗ್ ಸಂಹಿತೆ ಜಾರಿಗೆಗೊಳಿಸುವಂತೆ ವಾಡಾ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com