ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಸಯೀದ್ ಅಜ್ಮಲ್ ವಿದಾಯ

ಪಾಕಿಸ್ತಾನದ ವಿವಾದಾತ್ಮಕ ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ...
ಸಯೀದ್ ಅಜ್ಮಲ್
ಸಯೀದ್ ಅಜ್ಮಲ್
ಪಾಕಿಸ್ತಾನದ ವಿವಾದಾತ್ಮಕ ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ. 
ಪಾಕಿಸ್ತಾನದ ಪರವಾಗಿ ಮೂರು ಮಾದರಿಯಲ್ಲೂ ಮಿಂಚಿದ್ದ ಸಯೀದ್ ಅಜ್ಮಲ್ ಉತ್ತಮ ಫಾರ್ಮ್ ನಲ್ಲಿರುವಾಗಲೇ ವಿದಾಯ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ. 
ಟೆಸ್ಟ್ ನಲ್ಲಿ 35 ಪಂದ್ಯಗಳನ್ನು ಆಡಿರುವ ಅವರು 178 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಇನ್ನು 113 ಏಕದಿನ ಪಂದ್ಯಗಳಲ್ಲಿ 184 ವಿಕೆಟ್ ಗಳನ್ನು ಪಡೆದಿದ್ದಾರೆ. 24 ರನ್ ಗಳಿಗೆ 5 ವಿಕೆಟ್ ಪಡೆದಿರುವುದು ಅವರ ವೈಯಕ್ತಿಕ ಸಾಧನೆಯಾಗಿದೆ. 64 ಟಿ20 ಪಂದ್ಯಗಳಲ್ಲಿ 85 ವಿಕೆಟ್ ಪಡೆದಿದ್ದಾರೆ. 

ನಿವೃತ್ತಿ ಘೋಷಿಸಲು ಇದು ಸರಿಯಾದ ಸಮಯ ಎಂದಿರುವ 40 ವರ್ಷದ ಅಜ್ಮಲ್ ಸದ್ಯ ಚಾಲ್ತಿಯಲ್ಲಿರುವ ರಾಷ್ಟ್ರೀಯ ಟಿ20 ಪಂದ್ಯಾವಳಿ ಬಳಿಕ ಕ್ರಿಕೆಟ್ ನಿಂದ ದೂರು ಸರಿಯುವುದಾಗಿ ಘೋಷಿಸಿದ್ದಾರೆ. ಅಜ್ಮಲ್ 2009ರಲ್ಲಿ ಪಾಕಿಸ್ತಾನ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com