ಪಾಕ್ ಸ್ಪಿನ್ನರ್ ಮೊಹಮ್ಮದ್ ಹಫೀಜ್ ಬೌಲಿಂಗ್ ನಿಷೇಧಿಸಿದ ಐಸಿಸಿ

ಶಂಕಾಸ್ಪದ ಬೌಲಿಂಗ್ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್ ಮೊಹಮ್ಮದ್ ಹಫೀಜ್ ಗೆ ಬೌಲಿಂಗ್ ಮಾಡುವುದರಿಂದ ನಿಷೇಧ ಹೇರಲಾಗಿದೆ...
ಮೊಹಮ್ಮದ್ ಹಫೀಜ್
ಮೊಹಮ್ಮದ್ ಹಫೀಜ್
ನವದೆಹಲಿ: ಶಂಕಾಸ್ಪದ ಬೌಲಿಂಗ್ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್ ಮೊಹಮ್ಮದ್ ಹಫೀಜ್ ಗೆ ಬೌಲಿಂಗ್ ಮಾಡುವುದರಿಂದ ನಿಷೇಧ ಹೇರಲಾಗಿದೆ. 
ಪಾಕಿಸ್ತಾನದ ಬೌಲರ್ ಹಫೀಜ್ ಬೌಲಿಂಗ್ ಶೈಲಿಯನ್ನು ಪರಿಶೀಲಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನಿಯಮ ಉಲ್ಲಂಘನೆ ಮಾಡಿರುವುದು ಖಚಿತಪಡಿಸಿದ್ದು ತತ್ ಕ್ಷಣದಿಂದ ಜಾರಿಗೆ ಬರುವಂತೆಯೇ ಹಫೀಜ್ ಮೇಲೆ ನಿಷೇಧ ಹೇರಲಾಗಿದೆ. 
ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅನುಮಾನಾಸ್ಪಾದ ಬೌಲಿಂಗ್ ಶೈಲಿಯಿಂದಾಗಿ ಅಂಪೈರ್ ಐಸಿಸಿಗೆ ದೂರು ನೀಡಿದ್ದರು. 37ರ ಹರೆಯದ ಹಫೀಜ್ ಅವರ ಮೊದಲ ಬಾರಿಗೆ 2014ರಲ್ಲಿ ಮತ್ತು 2015ರಲ್ಲಿ ಎರಡನೇ ಬಾರಿಗೆ ಒಂದು ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com