ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಗಳಿಂದ ಬೇಸತ್ತು ನಾನು ನಿವೃತ್ತಿಯಾದೆ: ಸೌರವ್ ಗಂಗೂಲಿ

ಟೀಂ ಇಂಡಿಯಾಗೆ ಆಯ್ಕೆಯಾಗುವ ನಿರೀಕ್ಷೆಗಳಿಂದ ಬೇಸತ್ತು ನಾನು 2008ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್...
ಸೌರವ್ ಗಂಗೂಲಿ
ಸೌರವ್ ಗಂಗೂಲಿ
ಕೋಲ್ಕತ್ತಾ: ಟೀಂ ಇಂಡಿಯಾಗೆ ಆಯ್ಕೆಯಾಗುವ ನಿರೀಕ್ಷೆಗಳಿಂದ ಬೇಸತ್ತು ನಾನು 2008ರಲ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ. 
2017ರ ಇಂಡಿಯಾ ಟುಡೇ ಕಾನ್ಕ್ಲೇವ್ ಈಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಸೌರವ್ ಗಂಗೂಲಿ ಅವರು, ಆಯ್ಕೆಗಾರರು ನನ್ನನ್ನು ಆಯ್ಕೆ ಮಾಡುವಲ್ಲಿ ತಾರತಮ್ಯ ತೋರುತ್ತಿದ್ದರು ಹೀಗಾಗಿ ನನಗೆ ಆ ಹಂತದಲ್ಲಿ ಆಟ ಸಾಕು ಎನಿಸಿ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾಗಿ ಹೇಳಿದ್ದಾರೆ. 
ಸೌರವ್ ಗಂಗೂಲಿ ಅವರು ಟೀಂ ಇಂಡಿಯಾ ಟೆಸ್ಟ್ ತಂಡದ ಯಶಸ್ವಿ ನಾಯಕರಾಗಿದ್ದರು. 2005ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಗ್ರೆಗ್ ಚಾಪೆಲ್ ಟೀಂ ಇಂಡಿಯಾದ ಹೊಸ ತರಬೇತುದಾರರಾಗಿ ಆಯ್ಕೆಯಾಗಿದ್ದರು. ಗ್ರೆಗ್ ಚಾಪೆಲ್ ಹಾಗೂ ನನ್ನ ನಡುವಿನ ಜಟಾಪಟಿಯಿಂದಾಗಿ 2005ರಲ್ಲೇ ನನ್ನನ್ನು ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಸ್ಥಾನದಿಂದ ವಜಾ ಮಾಡಲಾಯಿತು ಎಂದರು. 
ಗ್ರೆಗ್ ಚಾಪೆಲ್ ಸೌರವ್ ಗಂಗೂಲಿ ಕುರಿತಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಇ-ಮೇಲ್ ವೊಂದನ್ನು ಮಾಡಿದ್ದರು. ಅದರಲ್ಲಿ ಗಂಗೂಲಿಯನ್ನು 'ವಿಚ್ಛಿದ್ರಕಾರಕ ಪ್ರಭಾವ' ಎಂದು ಕರೆದಿದ್ದರು. ಈ ಮೇಲ್ ಆನಂತರ ಮಾಧ್ಯಮಗಳಲ್ಲಿ ಸೋರಿಕೆಯಾಗಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. 
ಸೌರವ್ ಗಂಗೂಲಿ 1992ರಿಂದ 2008ರವರೆಗೆ ಟೀಂ ಇಂಡಿಯಾ ಪರ ಆಡಿದ್ದಾರೆ. ಟೆಸ್ಟ್ ನಲ್ಲಿ 113 ಪಂದ್ಯಗಳನ್ನು ಆಡಿದ್ದು 7,212 ರನ್ ಪೇರಿಸಿದ್ದರು. ಇನ್ನು 311 ಏಕದಿನ ಪಂದ್ಯಗಳನ್ನು ಆಡಿದ್ದು ಒಟ್ಟಾರೆ 11,363 ರನ್ ಸಿಡಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com