ಮಾರ್ಕೊ ಮರೈಸ್
ಕ್ರಿಕೆಟ್
96 ವರ್ಷಗಳ ದಾಖಲೆ ಮುರಿದ ದಕ್ಷಿಣ ಆಫ್ರಿಕಾ ಬ್ಯಾಟ್ಸ್ ಮನ್; ಮೊದಲ ದರ್ಜೆ ಕ್ರಿಕೆಟ್ ನಲ್ಲಿ ವೇಗದ ತ್ರಿಶತಕ!
ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ದೇಶೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಇದೇ ಮೊದಲ ಬಾರಿಗೆ ವೇಗದ ತ್ರಿಶತಕ ಸಿಡಿಸಿದ್ದು 96 ವರ್ಷದ ಹಳೆಯದಾದ...
ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ದೇಶೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಇದೇ ಮೊದಲ ಬಾರಿಗೆ ವೇಗದ ತ್ರಿಶತಕ ಸಿಡಿಸಿದ್ದು 96 ವರ್ಷದ ಹಳೆಯದಾದ ದಾಖಲೆಯೊಂದನ್ನು ಮುರಿದಿದ್ದಾರೆ.
ಬಾರ್ಡರ್ ತಂಡವನ್ನು ಪ್ರತಿನಿಧಿಸುತ್ತಿದ್ದ 24 ವರ್ಷದ ಮಾರ್ಕೊ ಮರೈಸ್ ಈಸ್ಟರ್ನ್ ಪ್ರಾವಿಯನ್ಸ್ ತಂಡದೆದುರು ನಡೆದ ಪಂದ್ಯದಲ್ಲಿ 191 ಎಸತೆದಲ್ಲಿ ತ್ರಿಶತಕ ಬಾರಿಸಿದ್ದು ವಿಶ್ವ ದಾಖಲೆ ಮಾಡಿದ ಮೊದಲ ಕ್ರಿಕೆಟಿಗ ಎನ್ನುವ ಖ್ಯಾತಿಗೆ ಭಾಜನವಾಗಿದ್ದಾರೆ.
ತ್ರಿಶತಕದಲ್ಲಿ 13 ಸಿಕ್ಸರ್ ಹಾಗೂ 35 ಬೌಂಡರಿ ಸೇರಿದೆ. ಮಾರ್ಕೊ ಮರೈಸ್ ಒಟ್ಟಾರೆ 503 ರನ್ ಬಾರಿಸಿ ಅತ್ಯಧಿಕ ರನ್ ಗಳಿಸಿ 2ನೇ ಕ್ರಿಕೆಟಿಗ ಎನ್ನುವ ದಾಖಲೆ ನಿರ್ಮಿಸಿದರು. ಈ ಹಿಂದೆ 1921ರಲ್ಲಿ ಆಸ್ಟ್ರೇಲಿಯಾದ ಚಾರ್ಲ್ಸ್ 221 ಎಸೆತದಲ್ಲಿ 300 ರನ್ ಬಾರಿಸಿದ್ದರು.


